ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಮುದಾಯ ಸಂಘಟಕರ ದರ್ಭಾರ.ಸರಕಾರ ಬಂದ ಕಡೆ ಬಣ್ಣ ಬದಲಾಯಿಸುವ ಸಮುದಾಯ ಸಂಘಟಕರು.ಒಬ್ಬೊಬ್ಬರ ಹಿಸ್ಟರಿ ಬಿಚ್ಚಿಡಲಿದೆ ಉದಯ ವಾರ್ತೆ.

Share to all

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಮುದಾಯ ಸಂಘಟಕರ ದರ್ಭಾರ.ಸರಕಾರ ಬಂದ ಕಡೆ ಬಣ್ಣ ಬದಲಾಯಿಸುವ ಸಮುದಾಯ ಸಂಘಟಕರು.ಒಬ್ಬೊಬ್ಬರ ಹಿಸ್ಟರಿ ಬಿಚ್ಚಿಡಲಿದೆ ಉದಯ ವಾರ್ತೆ.

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಳೆದ ಹಲವು ವರ್ಷಗಳಿಂದ ತಮ್ಮ ಮೂಲ ಹುದ್ದೆಯನ್ನು ಬಿಟ್ಟು ಮಹಾನಗರ ಪಾಲಿಕೆಯಲ್ಲಿ ನೀಲಿ ಮಸಿಯ ಪೆನ್ನು ಬಿಟ್ಟು ಗ್ರೀನ್ ಇಂಕ್ ಪೆನ್ನು ಹಿಡಿದು ದರ್ಭಾರ ನಡೆಸಿದ್ದಾರೆ.

ಹೌದು ಇವತ್ತು ನಾವು ಹೇಳಲು ಹೊರಟಿರುವುದು ಸಮುದಾಯ ಸಂಘಟನಾಧಿಕಾರಿ ಶಿದ್ಧಪ್ಪ ಬೇವೂರನ ಕಥೆ.ಇವರ ಮೂಲ ಹುದ್ದೆ ಸಮುದಾಯ ಸಂಘಟನಾಧಿಕಾರಿ ಆದರೆ ಇವರು ಪಾಲಿಕೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಜೊತೆಗೆ ವಲಯ ಆಯುಕ್ತರ ಹುದ್ದೆ ಅಲಂಕರಿಸಿದ್ದಾರೆ.ಇವರ ಬಗ್ಗೆ ಸಿಂಪಲ್ ಆಗಿ ಹೇಳಬೇಕೆಂದರೆ ಸರಕಾರ ಬಂದ ಕಡೆ ಕೊಡೆ ಹಿಡಿಯುವ ಆರ್ಟಿಸ್ಟ್ ಅಂತಾನೇ ಹೇಳಬಹುದು.ಬಿಜೆಪಿ ಸರಕಾರ ಬಂದಾಗ ಬಿಜೆಪಿ ಶಾಸಕರೊಬ್ಬರ ಸಂಭಂದಿ ಅಂತಾ ಹೇಳಿ ಬೇಳೆ ಬೇಯಿಸಿಕೊಂಡು, ಕಾಂಗ್ರೆಸ್ ಸರಕಾರ ಬಂದಾಗ ಕಾಂಗ್ರೆಸ್ ಶಾಸಕ ನನ್ನ ಕ್ಲೋಸ್ ಪ್ರೆಂಡ್ರೀ ಅಂತಾ ಬಣ್ಣ ಬದಲಾಯಿಸುವ ಆಸಾಮಿ.

 

ಇವರು ಕಳೆದ ಏಳೆಂಟು ವರ್ಷದಿಂದ Zonel commissioner ಆಗಿ ವಲಯ ಕಛೇರಿ 6,7,8 ರಲ್ಲಿ ಕೆಲಸ ಮಾಡಿದ್ದಾರೆ ವಲಯ ಕಛೇರಿ 6 ರಲ್ಲಯೇ ನಾಲ್ಕು ವರ್ಷದಿಂದ ವಲಯ ಆಯುಕ್ತರಾಗಿದ್ದಾರೆ.ಈ ವಲಯ ಕಛೇರಿ 6 ಅಂದರೆ ಬಂಗಾರದ ತತ್ತಿ ಇಡುವ ವಲಯ ಕಛೇರಿ ಅಂತಾನೇ ಕರೀತಾರೆ.ಹೀಗಾಗಿ ಇವರು ಈ ವಲಯ ಕಛೇರಿಯನ್ನ ಬಿಡತಾ ಇಲ್ಲಾ.

ಇವರು ಮೂಲತ: ಮಾತುಗಾರ ಮಾತಿನಿಂದಲೇ ಬೆಣ್ಣೆಯಲ್ಲಿಯ ಕೂದಲನ್ನು ತೆಗೆದಂಗೆ ಕೆಲಸ ಮಾಡ್ತಾರೆ.ಸಮುದಾಯ ಸಂಘಟನಾಧಿಕಾರಿಗಳ ಲೀಡರೂ ಆಗಿರುವ ಇವರು ಪಾಲಿಕೆಯಲ್ಲಿರುವ ಸಮುದಾಯ ಸಂಘಟನಾಧಿಕಾರಿಗಳಿಗೆ ಬೇಕಾದ ಹುದ್ದೆಯನ್ನು ಕಲ್ಪಿಸುವ ಕಾಮಧೇನು ಇವರು.

ಸಮುದಾಯ ಸಂಘಟನಾಧಿಕಾರಿ ಆದ ಇವರು ತಾವು ಮಾಡಬೇಕಾದ ಕೆಲಸ ಬಿಟ್ಟು ಪ್ರಮುಖ ಹುದ್ದೆಗಳಲ್ಲಿ ಮುಂದುವರೆಯುತ್ತಿರುವುದರ ವಿರುದ್ಧ ಸಂಘಟನೆಯೊಂದು ಪೌರಾಡಳಿತ ಇಲಾಖೆಗೆ ದೂರು ನೀಡಲು ಮುಂದಾಗಿದ್ದಾರೆ.ಅಲ್ಲದೇ ಲೋಕಾಯುಕ್ಕೂ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.ಉದಯ ವಾರ್ತೆ ಇಂದು ಇವರ ಪರಿಚಯ ಅಷ್ಠೇ ಮಾಡಿದೆ ಮುಂದಿನ ಸಂಚಿಕೆಯಲ್ಲಿ ಅಕ್ರಮ ಸಕ್ರಮ ನಿವೇಶನಗಳಿಗೆ ಖಾತಾ ನೀಡಿಕೆ.ಕರ್ನಾಟಕ ನಗರ/ಗ್ರಾಮಾಂತರ ಯೋಜನಾ ಕಾಯ್ದೆ 1961 ಉಲ್ಲಂಘನೆ ಬಗ್ಗೆ ದಾಖಲೆ ಸಮೇತ ಬಿಚ್ಚಿಡಲಿದೆ.

1998-2003-2004 ರ ಅವಧಿಯಲ್ಲಿ ಕೇಂದ್ರ ಪುರಸ್ಕೃತ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆಯಲ್ಲಿ ಸಮುದಾಯ ಸಂಘಟಕರು ಮತ್ತು ಸಮುದಾಯ ಸಂಘಟನಾಧಿಕಾರಿಗಳು ಗುತ್ತಿಗೆ ಆಧಾರದಲ್ಲಿ ಸೀಮಿತ ಅವಧಿಗೆ ನೇಮಕ ಮಾಡಿಕೊಳ್ಳಲಾಗಿತ್ತು.ಇವರ ಆಯ್ಕೆಯನ್ನ ಸುಪ್ರೀಂ ಕೋಟ್೯ 2006 ರಲ್ಲಿ ಸಂವಿಧಾನ ವಿರುದ್ಧವಾಗಿದೆ ಎಂದು ಹೇಳಿದೆ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author