ಬೆಂಕಿಯಿಂದ ಅರಣ್ಯ ಸಂರಕ್ಷಣೆ ಕುರಿತು ಅರಿವು ಅಭಿಯಾನ.ಮರ ಉಳಿಸಿ,ಮನುಕುಲ ಬೆಳೆಸಿ ಅರಣ್ಯ ಅಧಿಕಾರಿಗಳ ಮನವಿ.
ಯಲ್ಲಾಪುರ :- ಯಲ್ಲಾಪುರ ವಿಭಾಗದ ಮಂಚಿಕೇರಿ ಉಪ ವಿಭಾಗದ ಇಡಗುಂದಿ ವಲಯದಲ್ಲಿ ಬೆಂಕಿಯಿಂದ ಅರಣ್ಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಯಿತು.
ಇಡಗುಂದಿ ವಲಯದ ವ್ಯಾಪ್ತಿಯಲ್ಲಿ ಬರುವ ಅರಬೈಲ್,ಕಳಾಸೆ,ಗುಳ್ಳಾಪುರ,ಕೊಡ್ಲಗದ್ದೆ,ವಜ್ರಳ್ಳಿ, ಗ್ರಾಮಗಳಿಗೆ ತೆರಳಿ ಗ್ರಾಮದ ಜನರಿಗೆ ಬೆಂಕಿಯಿಂದ ಅರಣ್ಯ ಸಂರಕ್ಷಿಸುವ ಹಾಗೂ ಅರಣ್ಯಕ್ಕೆ ಬೆಂಕಿ ಬಿದ್ದಾಗ ತಕ್ಷಣಕ್ಕೆ ಕೈಕೊಳ್ಳಬೇಕಾದ ಕ್ರಮಗಳ ಕುರಿತು ಪ್ರತಿಜ್ಞಾವಿಧಿ ಭೋಧಿಸಲಾಯಿತು.
ಅಲ್ಲದೇ ಬೇಸಿಗೆ ಕಾಲ ಸಮೀಪಿಸುತ್ತಿದ್ದು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಲ್ಲಿ ಹಾಗೂ ಯಾವುದೇ ಅರಣ್ಯ ಅಪರಾಧಗಳು ಕಂಡು ಬಂದರೆ ಸ್ಥಳೀಯ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡುವಂತೆ ವಲಯ ಅರಣ್ಯ ಅಧಿಕಾರಿ ಶಿಲ್ಪಾ ನಾಯಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಒಂದು ಅರಣ್ಯ ಸಂರಕ್ಷಣೆ ಕಾರ್ಯಕ್ರಮದಲ್ಲಿ ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಸ್.ಜಿ.ಹೆಗಡೆ.ಮಂಚಿಕೇರಿ ಉಪ ವಿಭಾಗದ ಸಹಾಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹಿಮಾವತಿ ಭಟ್,ಸೇರಿದಂತೆ ಇಡಗುಂದಿ ವಲಯದ ಅರಣ್ಯ ಅಧಿಕಾರಿಗಳು ಭಾಗವಹಿಸಿದ್ದರು.
ಉದಯ ವಾರ್ತೆ ಯಲ್ಲಾಪುರ