ಬಿಡುವಿಲ್ಲದ ಕೆಲಸದ ಮದ್ಯೆಯೂ ಆಸ್ಪತ್ರೆಗೆ ತೆರಳಿ ಕಾರ್ಯಕರ್ತನ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.
ಹುಬ್ಬಳ್ಳಿ:-ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಂದರೆ ಕಾರ್ಯಕರ್ತರ ಬೆನ್ನೆಲುಬು ಅನ್ನೋದಕ್ಕೆ ಅವರು ಮಾಡುವ ಒಂದೊಂದು ಕೆಲಸನೂ ಬೆರಳು ಮಾಡಿ ತೋರಿಸುತ್ತವೆ.
ಅದಕ್ಕೊಂದು ತಾಜಾ ಉದಾಹರಣೆ ಅಂದರೆ ಅವರ ಬಿಜೆಪಿ ಕಾರ್ಯಕರ್ತ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಉಪಾದ್ಯಕ್ಷನ ಆರೋಗ್ಯ ವಿಚಾರಿಸಿದ ರೀತಿ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಗೊಳಿಸುತ್ತಿದೆ.
ಕಳೆದ ಸೋಮವಾರ ಬಿಜೆಪಿ ಯುವ ಮೋರ್ಚಾ ಉಪಾದ್ಯಕ್ಷ ಪ್ರವೀಣ ಕುಬಸದ ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅಪಘಾತದ ಸುದ್ದಿ ತಿಳಿದ ಸಚಿವ ಪ್ರಲ್ಹಾದ ಜೋಶಿ ತಮ್ಮ ಎಡಬಿಡದ ಕೆಲಸ ಮದ್ಯೆಯೂ ಆಸ್ಪತ್ರೆಗೆ ತೆರಳಿ ಕಾರ್ಯಕರ್ತನ ಆರೋಗ್ಯ ವಿಚಾರಿಸಿ,ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸಲಹೆ ನೀಡಿದರು.
ಕೇಂದ್ರ ಸಚಿವರ ಕಾರ್ಯಕರ್ತರ ಕಾಳಜಿ ನೋಡಿದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ.