ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಛೇರಿ 4 ರ ವಲಯ ಆಯುಕ್ತರ ಬದಲಾವಣೆಗೆ ಹೆಚ್ಚಿದ ಕೂಗು.ಜಿಲ್ಲಾಧಿಕಾರಿಗಳಿಗೆ ದೂರು.
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಛೇರಿ ನಾಲ್ಕರಲ್ಲಿ ವಲಯ ಆಯುಕ್ತರಾಗಿರುವ ರಮೇಶ ನೂಲ್ವಿ ಅವರನ್ನು ಬದಲಾವಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಮಹಾನಗರ ಪಾಲಿಕೆಯ ಪಟ್ಟಣ ಮಾರಾಟ ಸಮಿತಿಯ ಸದಸ್ಯರಾದ ಕವಿತಾ ದೊಡವಾಡ ಅವರು ವಲಯ ಆಯುಕ್ತರು ಕಳೆದ 2016 ರಿಂದ ಬೀದಿ ಬದಿ ವ್ಯಾಪಾರಿಗಳ ಕಾರ್ಯದಶಿಯಾಗಿದ್ದಾರೆ.ಅವರು ಬೀದಿ ಬದಿ ವ್ಯಾಪಾರಿಗಳ ಅಭಿವ್ರದ್ದಿ ವಿಷಯ ಚರ್ಚಿಸುವಲ್ಲಿ ವಿಫಲರಾಗಿದ್ದಾರೆ .ಅಲ್ಲದೇ ಕಳೆದ ಮೂರೂವರೆ ವರ್ಷಗಳಿಂದ ವಲಯ ಕಛೇರಿ ನಾಲ್ಕರಲ್ಲಿಯೇ ಇದ್ದಾರೆ.ಕೂಡಲೇ ಅವರನ್ನು ಬದಲಾವಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ವಲಯ ಕಛೇರಿ ನಾಲ್ಕರಲ್ಲಿ ಆಯುಕ್ತರಾಗಿರುವ ರಮೇಶ ನೂಲ್ವಿ ಅವರ ಕುರಿತು ಉದಯ ವಾರ್ತೆ ವರದಿ ಪ್ರಸಾರ ಮಾಡಿತ್ತು.ಅದ್ಯಾರೋ ಮನೆಯಲ್ಲಿ ಉಂಡವನೇ ಜಾಣ ಅನ್ನೋ ತರಹ ಸಮುದಾಯ ಸಂಘಟಕರು.ಮಹಾನಗರ ಪಾಲಿಕೆಯಲ್ಲಿ ಅವರದೇ ದರ್ಭಾರ ಅಂತಾ ವರದಿ ಮಾಡಿತ್ತು.ಈಗ ವರದಿಗೆ ಅಲ್ಲಿಯ ಜನ ಸ್ಪಂದಿಸಿದ್ದು ಅವರ ಬದಲಾವಣೆಗೆ ಕೂಗು ಎದ್ದಿದೆ.
ಇಷ್ಟೇ ಅಲ್ಲದೇ ವಲಯ ಆಯುಕ್ತರು ನವನಗರದ ಕರ್ನಾಟಕ ಒನ್ ಪ್ರಾಂಚೈಸಿ ವಿಚಾರದಲ್ಲಿ ವ್ಯಕ್ತಿಯೊಬ್ಬರಿಗೆ ಅನ್ಯಾಯ ಮಾಡಿದ್ದಾರೆಂದು ತಿಳಿದು ಬಂದಿದ್ದು ಅನ್ಯಾಯಕ್ಕೊಳಗಾದವರು ವಲಯ ಆಯುಕ್ತರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.ಅದರ ಡಿಟೇಲ್ ಗಾಗಿ ಉದಯ ವಾರ್ತೆಯಲ್ಲಿ ನಿರೀಕ್ಷಿಸಿ.