ಧಾರವಾಡ ಬಳಿ ಕಾರು ಪಲ್ಟಿ.ಕಾರಿನಲ್ಲಿದ್ದ MBBS ವಿದ್ಯಾರ್ಥಿ ಸಾವು.ಓರ್ವನಿಗೆ ಗಂಭಿರ ಗಾಯ.
ಧಾರವಾಡ:-ರಸ್ತೆಯ ತಿರುವಿನಲ್ಲಿ ಕಾರೊಂದು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ MBBS ವಿದ್ಯಾರ್ಥಿ ದೀಪಕ (30) ಎಂಬಾತ ಸಾವನ್ನಪ್ಪಿದರೆ ಇನ್ನೋರ್ವ ತೀವ್ರವಾಗಿ ಗಾಯಗೊಂಡಿದ್ದಾನೆ.
ಧಾರವಾಡ ಹೊರವಲಯದ ಮುಮ್ಮಿಗಟ್ಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ತಿರುವು ಕೊಡಲಾಗಿತ್ತು.ತಿರುವು ಕೊಟ್ಟಿರುವುದು ಕಾಣದ ಹಿನ್ನೆಲೆಯಲ್ಲಿ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ.
ರಸ್ತೆ ತಿರುವಿನಲ್ಲಿ ಕಾರು ಸರ್ವಿಸ್ ರಸ್ತೆಗೆ ತೆಗೆದುಕೊಳ್ಳಲು ಹೋಗಿ ಕಾರು ಪಲ್ಟಿಯಾಗಿದೆ.
ಯಾದಗಿರಿ ಜಿಲ್ಲೆಯ ವಿದ್ಯಾರ್ಥಿ ದೀಪಕ ಧಾರವಾಡ ಎಸ್ ಡಿ ಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತಿದ್ದ.
ಕಾರಿನಲ್ಲಿದ್ದ ಮತ್ತೋರ್ವ ವಿನಯ ಎಂಬ ಯುವಕನಿಗೆ ಕೂಡಾ ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಧಾರವಾಡದ ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.