ಶೆಟ್ಟರ್ ಘರವಾಪ್ಸಿ ಬೆನ್ನಲ್ಲೆ ಕಾಂಗ್ರೆಸ್ ಅಲರ್ಟ್. ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಬೆಂಬಲಿಸಿದ್ದ ಪಕ್ಷೇತರ ಪಾಲಿಕೆ ಸದಸ್ಯನಿಗೆ ಕಾಂಗ್ರೆಸ್ ಗಾಳ.
ಹುಬ್ಬಳ್ಳಿ:-ಕಳೆದ ವಿಧಾನಸಭೆ ಚುನಾವಣೆ ವೇಳೆ ಶೆಟ್ಟರ್ ಬೆಂಬಲಿಸಿದ್ದ ಪಾಲಿಕೆ ಪಕ್ಷೇತರ ಸದಸ್ಯ ಚೇತನ ಹಿರೇಕೆರೂರ್ ಈಗ ಕಾಂಗ್ರೆಸ್ ಪಕ್ಷಕ್ಕೆ ಜೈ ಎಂದಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಶೆಟ್ಟರ್ ಪರ ಕ್ಯಾಂಪೇನ್ ಮಾಡಿದ್ದ ಪಕ್ಷೇತರ ಸದಸ್ಯ ಚೇತನ ಹಿರೇಕೆರುರ
ಶೆಟ್ಟರ್ ವಾಪಸ್ ಘರವಾಪ್ಸಿ ಯಾಗುತ್ತಲೆ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ.
ಹುಬ್ಬಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಚೇತನ ಹಿರೇಕೆರೂರ ಸಚಿವ ಸಂತೋಷ ಲಾಡ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಈ ಹಿಂದೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶೆಟ್ಟರ್ ಬೆಂಬಲಿಸಿದ ಮರುದಿನವೇ ಚೇತನ ಹಿರೇಕೆರೂರರನ್ನ ಗಡಿಪಾರು ಮಾಡಲಾಗಿತ್ತು.ಅಂದು
ಚೇತನ ಹಿರೇಕೆರೂರ ಗಡಿಪಾರನ್ನು ಜಗದೀಶ್ ಶೆಟ್ಟರ್ ಖಂಡಿಸಿದ್ದರು.
ಶೆಟ್ಟರ್ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಪಾಲಿಕೆ ಪಕ್ಷೇತರ ಸದಸ್ಯ ಚೇತನ ಹಿರೇಕೆರೂರ
ಹುಧಾ ಮಾಹಾನಗರ ಪಾಲಿಕೆಯ ವಾರ್ಡ್ ನಂಬರ್ 52 ಪಾಲಿಕೆ ಸದಸ್ಯರಾಗಿದ್ದಾರೆ.