ಇತಿಹಾಸ ಬರೆಯಲಿರುವ ಬ್ರಹತ್ ತುಲಾಭಾರ. ಸಾಕ್ಷಿಯಾಗಲಿದೆ ಹುಬ್ಬಳ್ಳಿಯ ನೆಹರು ಮೈದಾನ.ಆನೆ ಅಂಬಾರಿ ಸಹಿತ ತುಲಾಭಾರ.
ಹುಬ್ಬಳ್ಳಿ:-ದೇಶದಲ್ಲಿಯ ಮೊದಲು ಎನ್ನಲಾದ ಶ್ರೀಗಳನ್ನು ಒಳಗೊಂಡಂತೆ ಆನೆ ಅಂಬಾರಿ ಸಹಿತ ಬ್ರಹತ್ ತುಲಾಭಾರಕ್ಕೆ ಹುಬ್ಬಳ್ಳಿಯ ನೆಹರು ಮೈದಾನ ಸಿದ್ಧಗೊಂಡಿದೆ.
ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನದ ಹಿರಿಯ ಫೀಠಾಧಿಪತಿ ಜಗದ್ಗುರು ಫಕೀರ ಸಿದ್ಧರಾಮ ಸ್ವಾಮೀಜಿ ಅಮ್ರತ ಮಹೋತ್ಸವದ ಅಂಗವಾಗಿ ಫೆಬ್ರುವರಿ 1 ರಂದು ತುಲಾಭಾರವನ್ನು ಆಯೋಜಿಸಲಾಗಿದೆ.ಈ ಒಂದು ಕಾರ್ಯಕ್ರಮ ಹೊಸ ಇತಿಹಾಸ ಬರೆಯಲಿದೆ ಎನ್ನಲಾಗಿದೆ.
ತುಲಾಭಾರಕ್ಕೆ 22 ಲಕ್ಷ ರೂ ವೆಚ್ವದಲ್ಲಿ 40 ಅಡಿ ಉದ್ದ,30 ಅಡಿ ಎತ್ತರ ಹಾಗೂ 20 ಅಡಿ ಅಗಲ ಇರುವ ಕಬ್ಬಿಣದ ತಕ್ಕಡಿಯನ್ನು ಸಿದ್ದಪಡಿಸಲಾಗಿದೆ.
ಶಿರಹಟ್ಟಿ ಸಂಸ್ಥಾನದ ಧ್ಯೇಯ ವಾಕ್ಯ ದ್ವೇಷ ಬಿಡು ಪ್ರೀತಿ ಮಾಡು ಸಂದೇಶವನ್ನು ಸಾರುವ ಬ್ರಹದಾಕಾರದ ತಕ್ಕಡಿಯನ್ನು ಸಿದ್ಧಪಡಿಸಲಾಗಿದೆ.ಏಕಕಾಲಕ್ಕೆ ಶ್ರೀಗಳನ್ನು ಹೊತ್ತು ಅಂಬಾರಿ ಆನೆ ಸಹಿತ ಅಂದಾಜು 5.5 ಟನ್ ತೂಕದ ತುಲಾಭಾರ ನಡೆಯಲಿದೆ.
ತುಲಾಭಾರಕ್ಕೆ 10 ರೂ ನಾಣ್ಯದ 5555 ಕೆಜಿ ನಾಣ್ಯ ಬಳಸಲಾಗಿದೆ.ಈ ನಾಣ್ಯಗಳು ಒಟ್ಟು 75 ಲಕ್ಷದ 40 ಸಾವಿರ ರೂಗಳದ್ದಾಗಿದೆ ಎಂದು ದಿಂಗಾಲೇಶ್ವರ ಸ್ವಾಮಿಗಳು ಹೇಳಿದ್ದಾರೆ.