ರಜತ್ ಪೋಸ್ಟರ್ ಮೇಲೆ ಮೋದಿ ಪೋಸ್ಟರ್ ಪೇಸ್ಟ್. ಪೊಲೀಸರ ದೌಡು.
ಹುಬ್ಬಳ್ಳಿ : ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ತಮ್ಮ ಶಕ್ತಿ ಪ್ರದರ್ಶನದ ಅಂಗವಾಗಿರುವ ರಜತ್ ಸಂಭ್ರಮ ಕಾರ್ಯಕ್ರಮದ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ.ಇದೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು ಮೋದಿ ಮತ್ತೊಮ್ಮೆ ಎನ್ನುವ ಪೋಸ್ಟರ್ ಕೂಡ ಅಂಟಿಸುವ ಕಾರ್ಯಕ್ರಮ ಆರಂಭಿಸಿದ್ದಾರೆ ಆದ್ರೆ ಅದೇ ಈಗ ವಿವಾದ ವಾಗಿದ್ದು ಈ ಹಿನ್ನಲೆ ಕಾಂಗ್ರೆಸ್ ಮುಖಂಡ ಪತ್ರಿಕಾ ಹೇಳಿಕೆ ಕೂಡ ಬಿಡುಗಡೆ ಮಾಡಿದ್ದಾರೆ.
ರಜತ ಸಂಭ್ರಮ ಕಾರ್ಯಕ್ರಮದ ಪ್ರಚಾರದ ಅಂಗವಾಗಿ ಗೋಡೆ ಪೋಸ್ಟರ್ ಗಳನ್ನು ಪೌಂಡೇಶನ್ ವತಿಯಿಂದ ಹಚ್ಚಲಾಗುತ್ತದೆ,ಧಾರವಾಡ ಲೋಕಸಭಾ ವ್ಯಾಪ್ತಿಯ ತುಂಬೆಲ್ಲಾ ಇದುವರೆಗೂ ಸುಮಾರು 5 ಸಾವಿರ ಪೋಸ್ಟರ್ ಗಳನ್ನೂ ಹಾಕಲಾಗಿದ್ದು ಇದರ ಬೆನ್ನಲ್ಲೇ ಹೊಟ್ಟೆ ಕಿಚ್ಚಿನಿಂದ ಬಿಜೆಪಿ ಅವರು ನವಲಗುಂದ ಹಾಗೂ ಹುಬ್ಬಳ್ಳಿಯ ಗೋಪನಕೊಪ್ಪ ಬಳಿ ಉದ್ದೇಶಪೂರ್ವಕವಾಗಿ ರಜತ ಸಂಭ್ರಮದ ಪೋಸ್ಟರ್ ಮೇಲೆ ಮೋದಿ ಮತ್ತೊಮ್ಮೆ ಪೋಸ್ಟರ್ ಹಾಕಲಾಗುತ್ತಿದೆ.ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಖಂಡಿಸಿದ್ದು. ತಪ್ಪಿತಸ್ಥ ಯುವಕರನ್ನು ಕೇಶ್ವಾಪುರ ಪೊಲೀಸ್ ಸಿಬ್ಬಂದಿಯ ವಶಕ್ಕೆ ನೀಡಲಾಗಿದೆ.
ಹತಾಶೆ ಗೊಂಡಿರುವ ಬಿಜೆಪಿ ನಾಯಕರ ಹೀನ ಮನಸ್ಥಿತಿಯ ಕೃತ್ಯ ಇದಾಗಿದ್ದು ಇಂತಹ ದ್ವೇಷ ರಾಜಕಾರಣವನ್ನು ನಾವು ಖಂಡಿಸುತ್ತೇವೆ. ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಇನ್ನು ಈ ಬಗ್ಗೆ ಸ್ಥಳೀಯ ಪೊಲೀಸರು ಯುವಕರಿಗೆ ತಿಳುವಳಿಕೆ ಹೇಳಿ ಸಮಸ್ಯೆ ಬಗೆಹರಿಸಿ ಕಳುಹಿಸಿದ್ದಾರೆ.