ಗಂಡ ಮತ್ತು ಅತ್ತೆಯ ಕಿರುಕುಳ. ಎರಡು ವರ್ಷದ ಮಗು ಕೊಲೆ ಮಾಡಿ ತಾಯಿ ನೇಣಿಗೆ ಶರಣು.
ಕಲಬುರಗಿ:-ಗಂಡ ಮತ್ತು ಅತ್ತೆಯ ಕಿರುಕುಳಕ್ಕೆ ಬೇಸತ್ತು ಸೊಸೆ ತನ್ನ ಎರಡು ವರ್ಷದ ಕಂದಮ್ಮನನ್ನು ಕೊಲೆ ಮಾಡಿ ತಾನೂ ನೇಣಿಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳೆದ ಮೂರು ವರ್ಷದ ಹಿಂದೆ ಆನಂದ ಎಂಬುವನ ಜೊತೆ ಶಿವಲೀಲಾಳ ಮದುವೆ ಆಗಿತ್ತು.ಅವರಿಬ್ಬರಿಗೆ ವರ್ಷಿತಾ ಎಂಬ ಎರಡು ವರ್ಷದ ಮಗಳಿದ್ದಳು.ಕಳೆದ ಒಂದು ವರ್ಷದಿಂದ ಶಿವಲೀಲಾಗೆ ಅವಳ ಅತ್ತೆ ಮತ್ತು ಗಂಡ ಕಿರುಕುಳ ನೀಡುತ್ತಾ ಬಂದಿದ್ದರು.
ಗಂಡ ಮತ್ತು ಅತ್ತೆಯೊಂದಿಗೆ ಜಗಳವಾಡಿ ತವರು ಮನೆಗೆ ಹೋಗಿದ್ದ ಶಿವಲೀಲಾ ಕಳೆದ ಎರಡು ದಿನದ ಹಿಂದ ಮರಳಿ ಗಂಡನ ಮನೆಗೆ ಬಂದಿದ್ದಳು.ಮತ್ತೆ ಗಂಡ ಅತ್ತೆಯ ಕಿರುಕುಳ ಕೊಡಲು ಆರಂಭಿಸಿದ ಹಿನ್ನೆಲೆಯಲ್ಲಿ ತನ್ನ ಎರಡು ವರ್ಷದ ಮಗಳನ್ನು ಕೊಲೆ ಮಾಡಿ ತಾನೂ ನೇಣಿಗೆ ಶರಣಾಗಿದ್ದಾಳೆ.
ಚಿಂಚೋಳಿ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅತ್ತೆ ಗಂಡನನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.