ಟ್ಯಾಕ್ಟರ್ ಪಲ್ಟಿ ಚಾಲಕ ಸಾವು ಪ್ರಕರಣ.ಅದಲ ಬದಲು ಕಂಚಿ ಬದಲ ಮಾಡಿದರೇ ಅರಣ್ಯ ಇಲಾಖೆ.ದಕ್ಷ ಅರಣ್ಯ ಇಲಾಖೆಯ ಅಧಿಕಾರಿಗಳೇ ಏನಿದು…?
ದಾಂಡೇಲಿ:- ಕಳೆದ ಎರಡು ದಿನಗಳ ಹಿಂದೆ ಪಣಸೋಲಿ ವನ್ಯ ಜೀವಿ ವಲಯದ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಮೃತ ಪಟ್ಟ ಘಟನೆ ಪಣಸೋಲಿ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ನಡೆದಿದೆ.
ಆದರೆ ದಾಂಡೇಲಿ ಗ್ರಾಮೀಣ ಪೋಲೀಸ ಠಾಣೆಯಲ್ಲಿ ವೆಹಿಕಲ್ ಮೂವಿಂಗ್ ನಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ್ದಾನೆ ಎಂದು ದೂರು ದಾಖಲಾಗಿದೆ.
ಪಲ್ಟಿಯಾಗಿರುವ ಟ್ರ್ಯಾಕ್ಟರ್ ನಲ್ಲಿ ಸಾಗವಾನಿ ಕಟ್ಟಿಗೆ ದೊರೆತಿದೆ.ಹಾಗಾದರೆ ಆ ಕಟ್ಟಿಗೆ ಯಾರದು.? ಟ್ರ್ಯಾಕ್ಟರ್ ಯಾರದು.? ಪೋಲೀಸರು ದಾಖಲಿಸಿಕೊಂಡಿರುವ ದೂರಿನಲ್ಲಿ ಟ್ರ್ಯಾಕ್ಟರ್ ಮಾಲಿಕ ಹೆಸರು ಯಾಕೆ ದಾಖಲು ಮಾಡಿಕೊಂಡಿಲ್ಲಾ ಹೀಗೆ ಪಲ್ಟಿ ಟ್ರ್ಯಾಕ್ಟರ್ ಹಿಂದೆ ಹತ್ತಾರು ಸಂಶಯದ ಹುತ್ತಗಳು ಈಗ ಎದ್ದಿವೆ.
ಈ ಪಣಸೋಲಿ ವನ್ಯ ಜೀವಿ ವಲಯದಲ್ಲಿ ದಿನ ನಿತ್ಯ ಅರಣ್ಯ ಸಂಚಾರಿ ದಳದ ವಾಹನ ಪೆಟ್ರೋಲಿಂಗ್ ಮಾಡತಾ ಇರುತ್ತವೆ.ಹಾಗಿದ್ದಾಗೂ ಕಟ್ಟಿಗೆ ಹೇಗೆ ಕಡಿದರು.ಅಷ್ಟೊಂದು ಪ್ರಮಾಣದ ಕಟ್ಟಿಗೆ ಸಾಗಾಟ ಅರಣ್ಯ ಇಲಾಖೆಗೆ ಗೊತ್ತಿರದೇ ಸಾಗಾಟ ಹೇಗೆ ಇದಕ್ಕೆಲ್ಲಾ ಹಿರಿಯ ಅಧಿಕಾರಿಗಳು ಉತ್ತರ ನೀಡಬೇಕಿದೆ.
ಟ್ರ್ಯಾಕ್ಟರ್ ಪಲ್ಟಿ ಆಗಲು ಅದರಲ್ಲಿ ಹೇರಲಾದ ಸಾಗವಾನಿ ಕಟ್ಟಿಗೆಯೇ ಕಾರಣ ಎನ್ನಲಾಗಿದೆ.ಬೆಕ್ಕಿನ ಕೊರಳಿಗೆ ಘಂಟೆ ಕಟ್ಟೋರು ಯಾರು ಎನ್ನುವ ಪರಿಸ್ಥಿತಿ ಅರಣ್ಯ ಇಲಾಖೆದ್ದಾಗಿದೆ.