ತಲವಾಯಿ ಕೊಲೆ ಪ್ರಕರಣ.ಏಳು ಜನ ಆರೆಸ್ಟ್.ಇನ್ನೂ ಏಳು ಜನರಿಗಾಗಿ ಪೋಲೀಸರ ಹುಡುಕಾಟ.
ಧಾರವಾಡ:- ನಿನ್ನೆ ಧಾರವಾಡದಲ್ಲಿ ಜಾಗದ ವಿಚಾರಕ್ಕೆ ನಡೆದ ವ್ಯಕ್ತಯೊಬ್ಬನ ಕೊಲೆಗೆ ಸಂಬಂಧಿಸಿದಂತೆ ಏಳು ಜನರನ್ನು ಧಾರವಾಡ ಗ್ರಾಮೀಣ ಪೋಲೀಸರು ಬಂಧಿಸಿದ್ದು ಇನ್ನೂ ಏಳು ಜನರ ಹುಡುಕಾಟ ನಡೆಸಿದ್ದಾರೆ.
ಬಂಧಿತರನ್ನು ರಾಜು,ಸಚಿನ್,ಫಕ್ಕೀರಪ್ಪ,ಸಂತೋಷ,ಚಂದ್ರಶೇಖರ,ಮಲ್ಲಪ್ಪ ಎಂದು ಗುರುತಿಸಲಾಗಿದೆ. ತಲವಾಯಿ ಗ್ರಾಮದಲ್ಲಿ ನಿನ್ನೆ ನಡೆದ ಘಟನೆಯಿಂದ ಮೌನದ ವಾತಾವರಣ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಕಮ್ಮಾರ ಕುಟುಂಬದವರೆಲ್ಲಾ ಮನೆಗೆ ಕೀಲಿ ಜಡಿದು ಊರು ಬಿಟ್ಟಿದ್ದರೆ.ಗ್ರಾಮದ ಜನ ಸಹ ಮನೆ ಬಿಟ್ಟು ಹೊರಬರದೇ ಭಯಭೀತರಾಗಿದ್ದಾರೆ.ಈ ಗ್ರಾಮದಲ್ಲಿ ಇಂತಹ ಘಟನೆ ನಡೆದಿದ್ದು ಇದೇ ಮೊದಲು ಎನ್ನಲಾಗಿದೆ.
ಧಾರವಾಡ ಗ್ರಾಮೀಣ ಪೋಲೀಸರು ನಿನ್ನೆಯಿಂದ ತಲವಾಯಿ ಗ್ರಾಮದಲ್ಲಿ ಬೀಡುಬಿಟ್ಟಿದ್ದು.ಉಳಿದ ಆರೋಪಿಗಳಿಗಾಗಿ ಜಾಲ ಬೀಸಿದದ್ದಾರೆ.