ಅಧ್ಯಕ್ಷ ಅಲ್ತಾಫ್ ಹಾಗೂ ಶಹಜಮಾನ ಜೊತೆ ಡಿಕೆಶಿ ಲೋಕಸಭಾ ಚರ್ಚೆ: ಬಿಜೆಪಿ ಮಣಿಸುವಂತೆ ಸೂಚನೆ
ಹುಬ್ಬಳ್ಳಿ : ಇಂದು ಹುಬ್ಬಳ್ಳಿಗೆ ಆಗಮಿಸಿದ್ದ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತನ್ನ ಆಪ್ತ ವಲಯದ ಜೊತೆ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದು,ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವ ರೀತಿ ಕಾರ್ಯತಂತ್ರ ರೂಪಿಸಬೇಕು ಎನ್ನುವ ಸಲಹೆ ಸೂಚನೆ ನೀಡಿ,ಸಕಲ ರೀತಿಯಲ್ಲಿ ಚುನಾವಣೆಗೆ ಸನ್ನದ್ಧರಾಗಿ ಇರುವಂತೆ ಸೂಚನೆ ನೀಡಿದ್ದಾರೆ.
ಇಂದು ಬೆಳಗ್ಗಿನ ಜಾವ ಹುಬ್ಬಳ್ಳಿಗೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಖಾಸಗಿ ಹೋಟೆಲ್ ನಲ್ಲಿ ವಿಶ್ರಮಿಸಿ ನಂತರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಹಾಗೂ ತನ್ನ ಆಪ್ತ ಶಿಷ್ಯ ಶಹಜಮಾನ್ ಮೂಜಾಹಿದ್ ರನ್ನು ಕರೆದುಕೊಂಡು ಶಿರಸಿ ವರೆಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಬೆಳಸಿದರು
ಈ ವೇಳೆ ಜಿಲ್ಲೆಯ ಆಂತರಿಕ ವಿಚಾರ,ಕಾಂಗ್ರೆಸ್ ಲೋಕಸಭಾ ಟಿಕೆಟ್ ಆಕಾಂಕ್ಷಿಗಳು ಕಾರ್ಯ ವೈಖರಿ ಸೇರಿದಂತೆ ಬಿಜೆಪಿ ನಾಯಕರ ಯೋಜನೆಗಳ ಮಾಹಿತಿಯನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.ಅಲ್ಲದೆ ಧಾರವಾಡ ಲೋಕಸಭೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಪ್ರಮುಖ ಮುಖಂಡರ ಸಲಹೆ ಪಡೆದಿದ್ದು ಇನ್ನೇನು ಕೆಲ ದಿನಗಳಲ್ಲಿ ಮೌಖಿಕವಾಗಿ ಟಿಕೆಟ್ ಆಕಾಂಕ್ಷಿ ತಯಾರಿ ಬಗ್ಗೆ ಸೂಚನೆ ನೀಡುವುದಾಗಿ ಕೂಡ ಹೇಳಿದ್ದಾರೆ ಎಂದು ತಿಳಿದು ಬಂದಿದೆ
ಇನ್ನು ಜಿಲ್ಲೆಯಲ್ಲಿ ಈಗಾಗಲೇ ಶಾಸಕ ಅಬ್ಬಯ್ಯ ,ಕಾರ್ಯಕರ್ತರಾದ ವಿನೋದ್ ಅಸೋಟಿ ಹಾಗೂ ಶಾಕಿರ್ ಸನದಿ ಅವರಿಗೆ ಸೂಕ್ತ ಸ್ಥಾನ ಮಾನ ನೀಡಿದ್ದು ಮುಂದಿನ ದಿನಗಳಲ್ಲಿ ಇನ್ನು ಹಲವು ನಾಯಕರಿಗೆ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನುವುದು ತಿಳಿದು ಬಂದಿದೆ.