ಊಟ ಮುಗಿಸಿ ವಾಕಿಂಗ್ ಹೋಗಿದ್ದಕ್ಕೆ ಕಲ್ಲಿನಿಂದ ಹಲ್ಲೆ ಮಾಡಿದ ಪುಡಿರೌಡಿಗಳು.ಹೆಚ್ಚಾದ ಪುಡಿರೌಡಿಗಳ ಹಾವಳಿ; ಊಟ ಮುಗಿಸಿ ವಾಕಿಂಗ್ ಹೋಗಿದ್ದಕ್ಕೆ ಕಲ್ಲಿನಿಂದ ಹಲ್ಲೆ.
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತ್ತೆ ಪುಡಿರೌಢಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ಊಟ ಮುಗಿಸಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯ ಮೇಲೆ, ಮಾರಣಾಂತಿಕವಾಗಿ ಹಲ್ಲೇ ಮಾಡಿರುವ ಘಟನೆ ಮಂಟೂರು ರಸ್ತೆಯ ಗಾಂಧಿ ಏಕ್ತಾ ಕಾಲೋನಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗೈಬುಖಾನ್ ಅಕ್ಕಿಂ (29) ಎಂಬಾತನ ಮೇಲೆ ಹಲ್ಲೇ ಮಾಡಲಾಗಿದ್ದು, ಮಣಿಕಂಠ, ಸಾಹಿಲ್, ಮತ್ತೊಬ್ಬ ಸೇರಿಕೊಂಡು ಗಾಂಜಾ, ಎಣ್ಣೆ ನಶೆಯಲ್ಲಿ ಸುಖಾ ಸುಮ್ಮನೆ ಏಕಾಏಕಿ ತಂಟೆ ತೆಗೆದು ಕಾಲಿನಿಂದ ಒದ್ದು, ಕೆಳಗೆ ಬಿಳಿಸಿ, ಕಲ್ಲಿನಿಂದ ಹಲ್ಲೇ ಮಾಡಿದ್ದಾರೆ. ಪರಿಣಾಮ ಗೈಬುಖಾನ್’ಗೆ ಗಂಭೀರವಾಗಿ ಗಾಯಗಳಾಗಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
https://youtu.be/YSSzMAxRFOc?si=L6iZIX6Mb1Xfrs81