ದಾವೂದ್(ಎಂ ಡಿ) ಕೊಲೆಗೆ ಯತ್ನ ಪ್ರಕರಣ.ಎಂಟು ಜನರ ಹೆಡಮುರಿ ಕಟ್ಟಿದ ಟೌನ್ ಪೋಲೀಸರು.

Share to all

ದಾವೂದ್(ಎಂ ಡಿ) ಕೊಲೆಗೆ ಯತ್ನ ಪ್ರಕರಣ.ಎಂಟು ಜನರ ಹೆಡಮುರಿ ಕಟ್ಟಿದ ಟೌನ್ ಪೋಲೀಸರು.

ಹುಬ್ಬಳ್ಳಿ:- ಕಳೆದ ಗುರುವಾರ ರಾತ್ರಿ ಎಲ್ಲರೂ ಶಿವರಾತ್ರಿ ಸಂಭ್ರಮದಲ್ಲಿರುವಾಗಲೇ ಹತ್ತಾರು ಜನ ಸೇರಿ ಎರಡು ಗುಂಪುಗಳಾಗಿ ರೌಡೀ ಶೀಟರ್ ದಾವೂದ್ @(MD) ಮೇಲೆ ಕೊಲೆಗೆ ಯತ್ನ ಮಾಡಿದ್ದ ಎಂಟು ಜನರನ್ನು ಹುಬ್ಬಳ್ಳಿ ನಗರ ಪೋಲೀಸ ಠಾಣೆಯ ಪೋಲೀಸರು ಬಂಧಿಸಿದ್ದಾರೆ.

ಬಂಧಿತರನ್ನು
1) ಬಾಲರಾಜ.ಬಳ್ಳಾರಿ (ಬಾಲ್ಯಾ)
2)ಅಲ್ತಾಪ ಹುಸೇನ ಮಕಬುಲಹ್ಮದ ಕಣವಿ.
3)ಈಜಾಜ್ ಹಮೀದ ಹೊಂಗಲ್.
4)ರಿಯಾಜ್ ಅಹ್ಮದ ಮೆಹಬೂಬಸಾಬ.ಕಲಾದಗಿ.
5)ಬಸವರಾಜ ಸಂಕಪ್ಪ.ಬಳ್ಳಾರಿ.
6)ಮಹ್ಮದಸಾಧಿಕ ಇಸ್ಮಾಯಲಸಾಬ ಉದಯಕರ.
7)ಮುಜಪರ ಮುಕ್ತಿಯಾರ ಅಹ್ಮದ ಹಾವೇರಿ.
8)ದತ್ತಾತ್ರೆಯ ಪ್ರಕಾಶ.ಮತ್ತಿಕಟ್ಟಿ.ಎಲ್ಲರನ್ನೂ ಪೋಲೀಸರು ಬಂಧಿಸಿ ಬಂಧಿತರ ಮೇಲೆ ಕೊಲೆಗೆ ಯತ್ನ ಪ್ರಕರಣ ದಾಖಲಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಂಜುಮನ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಅಂಜುಮನ್ ಕಮೀಟಿ ಆಸ್ಪತ್ರೆಯ ಸದಸ್ಯತ್ವ ಪಡೆದಿರುವ ದಾವೂದ್ ಊಫ್೯ MD ಮೇಲೆ ರೌಡಿಗಳು ದಾಳಿ ಮಾಡಿದ್ದರು.ಕೂದಲೆಳೆ ಅಂತರದಲ್ಲಿ ಎಂಡಿ ಪಾರಾಗಿ ಬಂದು ನಗರ ಪೋಲೀಸ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಹೌದು ಇದೆಲ್ಲಾ ಯಾಕೆ ನಡೀತು ಅಂತಾ ಪ್ರಕರಣ ಕೆದಕಾ ಹೋದರೆ ಅದು ಎಕ್ಕಾ ರಾಜಾ ರಾಣಿ ಕಡೆ ಬೆರಳು ಮಾಡಿ ತೋರಿಸುತ್ತಿದೆ.ಆದರೆ ಪೋಲೀಸರ ತನಿಖೆಯಲ್ಲಿ ಇದೆಲ್ಲವೂ ಏನಾಯ್ತು ಗೊತ್ತಿಲ್ಲಾ….

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author