ದಾವೂದ್ ಕೇಸ್ ನಲ್ಲಿ ಪೊಲೀಸರ ಎಡವಟ್ಟು. ಟ್ವಿಸ್ಟ್ ಮೇಲೆ ಟ್ವಿಸ್ಟ್,ಹಲವು ಆರೋಪಿಗಳ ರಕ್ಷಣೆ..?
ಹುಬ್ಬಳ್ಳಿ : ರೌಡಿ ದಾವೂದ್ ಮೇಲೆ ಅಟ್ಯಾಕ್ ಮಾಡಿದ ಪರಿಣಾಮ ಬಂಧನವಾಗಿರುವ ಎಂಟು ಜನ ಆರೋಪಿಗಳ ಹೊರತಾಗಿಯೂ ಇನ್ನು ಹಲವು ಪ್ರಮುಖ ರೌಡಿಗಳು ಹಾಗೂ ಜೂಜುಕೋರ ಬುಕ್ಕಿಗಳು ಕೊಲೆ ಸಂಚು ರೂಪಿಸುವಲ್ಲಿ ಪಾತ್ರ ವಹಿಸಿದ್ದರು ಎನ್ನುವುದು ಕೇಸ್ ನಲ್ಲಿ ಕಂಡು ಬಂದಿದೆ.
ದಾವೂದ್ ಕೊಲೆ ಯತ್ನದ ನಿಖರ ಕಾರಣ ಇದುವರೆಗೂ ಪೊಲೀಸರು ಬಹಿರಂಗ ಪಡಿಸಿಲ್ಲ ಆದ್ರೆ ಇನ್ನು ಕೆಲ ರಾಜಕಾರಣಿ ರೌಡಿಗಳು ಹಾಗೂ ಬುಕ್ಕಿಗಳು ಈ ಸಂಚಿನಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಟೌನ್ ಪೊಲೀಸರು ಎಂಟು ಜನ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಆದ್ರೆ ಇವರ ಕೃತ್ಯಕ್ಕೆ ಮಾರ್ಗದರ್ಶನ,ಶಸ್ತ್ರಾಸ್ತ್ರ,ಹಾಗೂ ರೌಡಿಗಳನ್ನು ಫೀಲ್ಡಿಂಗ್ ಮಾಡಿಸಿದ ಹಲವರನ್ನು ಪೊಲೀಸರು ಇದುವರೆಗೂ ವಿಚಾರಣೆಗೆ ಕೂಡ ಒಳಪಡಿಸಲ್ಲ.ಇದು ಸಂಶಯಕ್ಕೆ ಕಾರಣವಾಗಿದೆ ಅಲ್ಲದೆ ಪ್ರಮುಖವಾಗಿ ಆರೋಪಿಗಳ ಬೆನ್ನಿಗೆ ರಾಜಕೀಯ ನಾಯಕರು ಕೂಡ ಸಾಥ್ ನೀಡಿದ್ದಾರೆ.
ಈ ಎಲ್ಲಾ ವಿಚಾರಗಳಲ್ಲೂ ಪೊಲೀಸರು ಮಾಡಿದ ತಪ್ಪೇನು? ಹಿಂದಿರುವ ಪಾತಕಿಗಳು ಯಾರು? ಇವರು ಹಿಂದಿರುವ ರಾಜಕೀಯ ಪಕ್ಷಗಳ ಮುಖಂಡರು ಯಾರು ಎನ್ನುವ ಸಂಪೂರ್ಣ ಡೀಟೇಲ್ಸ್ ಉದಯ ವಾರ್ತೆಯಲ್ಲಿ exclusive ಆಗಿ ಬರಲಿದೆ.