ಮದ್ಯರಾತ್ರಿ ಚೆಕ್ ಪೋಸ್ಟಗಳಿಗೆ ವಿಸಿಟ್ ಮಾಡಿದ ಪಾಲಿಕೆಯ ಆಯುಕ್ತರು.ಸರಿಯಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳ ತರಾಟೆ.
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಹಾಗೂ ಚುನಾವಣಾ ಅಧಿಕಾರಿ ಈಶ್ವರ ಉಳ್ಳಾಗಡ್ಡಿ ಅವರು ಮದ್ಯ ರಾತ್ರಿ ಚೆಕ್ ಪೋಸ್ಟಗಳಿಗೆ ತೆರಳಿ ಚೆಕ್ ಪೋಸ್ಟ ಮತ್ತು ವಾಹನಗಳ ಪರಿಶೀಲನೆ ನಡೆಸಿದರು.
ಚೆಕ್ ಪೋಸ್ಟ್ ಗಳಲ್ಲಿಯ ಅಧಿಕಾರಿಗಳಿಗೆ ಸರಿಯಾಗಿ ಸೌಲಭ್ಯ ನೀಡದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಕಮೀಷನರ್ ವಾಹನಗಳ ತಪಾಸಣೆಯನ್ನೂ ಕೈಕೊಂಡರು.ಅಲ್ಲದೇ ಚುನಾವಣೆ ಕರ್ತವ್ಯದಲ್ಲಿರುವ ಚೆಕ್ ಪೋಸ್ಟ ಸಿಬ್ಬಂದಿಗಳು ಡೇ ಆ್ಯಂಡ್ ನೈಟ್ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.