ಅಕ್ರಮ ಗಾಂಜಾ ಮಾರಾಟ. ಇಬ್ಬರ ಯುವಕರನ್ನು ಅರೆಸ್ಟ್ ಮಾಡಿದ ಸಿಸಿಬಿ ಪೊಲೀಸರು.

Share to all

ಅಕ್ರಮ ಗಾಂಜಾ ಮಾರಾಟ. ಇಬ್ಬರ ಯುವಕರನ್ನು ಅರೆಸ್ಟ್ ಮಾಡಿದ ಸಿಸಿಬಿ ಪೊಲೀಸರು.

ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ, ಖಚಿತ ಮಾಹಿತಿ ಮೇರೆಗೆ, ಸಿಸಿಬಿ ಪೊಲೀಸರು ದಾಳಿ ಮಾಡಿ ಇಬ್ಬರನ್ನೂ ಬಂಧಿಸಿದ್ದಾರೆ.

ಲೋಕಪ್ಪನ ಹಕ್ಕಲ ಬಿ.ವ್ಹಿ.ಬಿ ಇಂಜಿನಿಯರಿಂಗ್ ಕಾಲೇಜ್ ಹಿಂದಿನ ಗೇಟ್ ಹತ್ತಿರ, ಅಕ್ರಮವಾಗಿ ಗಾಂಜಾ ಮಾರಾಟ ಮಾಡ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಇಬ್ಬರ ಯುವಕರನ್ನು ಅರೆಸ್ಟ್ ಮಾಡಿದ್ದಾರೆ. ಶಾಂತಿ ಕಾಲೋನಿಯ ಅಳಗುಂಡಗಿ ಹೈಟ್ಸ್’ನ ನಿವಾಸಿಗಳಾದ ಜೇಸನ್ ಮರಿಯಾದಾಸ (21), ವಿನಯಕುಮಾರ ಹಂಚಾಟೆ (21) ಬಂಧಿತರಾಗಿದ್ದು, ಇವರು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಸಿಸಿಬಿ ಇನ್ಸ್ಪೆಕ್ಟರ್ ಸಿದ್ದಪ್ಪ ಎಸ್ ಶಿಮಾನಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, 11.500 ರೂ ಮೌಲ್ಯದ 238 ಗ್ರಾಂ ಜಾಂಜಾ, 500 ರೂ ನಗದು, ಹಾಗೂ ಒಂದು ಗಾಂಜಾ ಸೇದುವ ಚಿಲುಮೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎನ್’ಡಿಪಿಎಸ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author