ಕುಚುಕು ಗೆಳೆಯನನ್ನೇ ಚಾಕುವಿನಿಂದ ಇರಿದು ಬರ್ಭರ ಕೊಲೆ.ಕೊಲೆಗೆ ಕಾರಣ ಮಾತ್ರ ನಿಗೂಢ.ಆರೋಪಿ ಪರಾರಿ.
ಹುಬ್ಬಳ್ಳಿ:-ಕೂಡಿ ಆಡಿದ ಗೆಳೆಯನನ್ನೇ ಇಬ್ಬರು ಗೆಳೆಯರು ಕೂಡಿಕೊಂಡು ಚಾಕು ಮತ್ತು ಕಟ್ಟಿಗೆಯಿಂದ ಹೊಟ್ಟಿಗೆ ಇರಿದು ಬರ್ಭರವಾಗಿ ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದಲ್ಲಿ ನಡೆದಿದೆ.
ಕಿರಣ ಬಡಿಗೇರ ಹಾಗೂ ಸಂಗಮೇಶ ಅನ್ನುವ ಇಬ್ಬರು ಸೇರಿಕೊಂಡು ಗೆಳೆಯ ಪ್ರಕಾಶ ಮಾನೆ ಎಂಬುವವನನ್ನು ಬರ್ಭರವಾಗಿ ಕೊಲೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಕೇಶ್ವಾಪುರ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಕೊಲೆಗೆ ಕಾರಣ ಹುಡುಕುತ್ತಿದ್ದಾರೆ.ಅಲ್ಲದೇ ಇಬ್ಬರೂ ಆರೋಪಿಗಳನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.