ಕೆಲಸಗಳ ಒತ್ತಡದ ಮದ್ಯೆಯೂ ಸಿಬ್ಬಂದಿಗಳೊಂದಿಗೆ ಬಣ್ಣ ಆಡಿದ ಕಮೀಷನರ್.ಬಣ್ಣ ಎರಚುವ ಮೂಲಕ ತನ್ನ ನೌಕರರ ಖುಷಿಪಡಿಸಿದ ಆಯುಕ್ತರು.
ಹುಬ್ಬಳ್ಳಿ:-ವಿವಿಧ ಬಣ್ಣಗಳಿಂದ ಕೂಡಿದ ವರ್ಣರಂಜಿತ ಮತ್ತು ಮನರಂಜನೆಯ ಹಬ್ಬವೆಂದರೆ ಹೋಳಿ ಹಬ್ಬ ಈ ಹಬ್ಬವನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.ಜಾತಿ,ಧರ್ಮ,ಮತ,ಅನ್ನದೇ ಎಲ್ಲರೂ ಒಟ್ಟಾಗಿ ಈ ಹಬ್ಬವನ್ನು ಆಚರಿಸುತ್ತಾರೆ.
ಇಂದು ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ:ಈಶ್ವರ ಉಳ್ಳಾಗಡ್ಡಿ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬಕ್ಕೆ ಮೆರಗು ತಂದು ಕೊಟ್ಟರಲ್ಲದೇ ತಮ್ಮ ಸಿಬ್ಬಂದಿಗಳಿಗೂ ಬಣ್ಣ ಹಚ್ಚುವ ಮೂಲಕ ಖುಷಿ ಪಡಿಸಿದ್ದಾರೆ.