ಧಾರವಾಡ ಲೋಕಸಭಾ ಚುನಾವಣೆ: ಅಸೂಟಿ ಪರ ಸಚಿವ ಲಾಡ್ ಪ್ರಚಾರ. ಲಿಂಗಾಯತ ಸಮುದಾಯದ ಮುಖಂಡರ ಸಭೆ

Share to all

ಧಾರವಾಡ ಲೋಕಸಭಾ ಚುನಾವಣೆ: ಅಸೂಟಿ ಪರ ಸಚಿವ ಲಾಡ್ ಪ್ರಚಾರ.
ಲಿಂಗಾಯತ ಸಮುದಾಯದ ಮುಖಂಡರ ಸಭೆ

ಧಾರವಾಡ:- ಧಾರವಾಡ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರ ಪ್ರಚಾರದ ಅಂಗವಾಗಿ ಮಯೂರ್ ಹೋಟೆಲ್ ನಲ್ಲಿ ಲಿಂಗಾಯತ ಸಮಾಜದ ಮುಖಂಡರ ಸಭೆಯನ್ನು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ನಡೆಸಿದರು.

ಮುಂಬರುವ ಚುನಾವಣೆಯಲ್ಲಿ
ಲಿಂಗಾಯತ ಸಮಾಜದ ಬಾಂಧವರು ನಮ್ಮ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ನನ್ನದು ಎಂದು ಈ ಸಂದರ್ಭದಲ್ಲಿ ಲಾಡ್ ಅವರು ಹೇಳಿದರು.

ಅಸೂಟಿ ಅವರ ಪರ ಪ್ರಚಾರದ ಅಂಗವಾಗಿ ಲಾಡ್ ಅವರು ಈಗಾಗಲೇ ಹಲವು ಸಮುದಾಯದ ಮುಖಂಡರ ಸಭೆಯನ್ನು ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತಗಳ ಸಂಖ್ಯೆ ಗಮನಾರ್ಹ ಸಂಖ್ಯೆಯಲ್ಲಿದ್ದು, ಅಭ್ಯರ್ಥಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಇದರಿಂದಾಗಿ ಲಿಂಗಾಯತ ಮುಖಂಡರ ಸಭೆಯನ್ನು ಲಾಡ್ ಅವರು ನಡೆಸಿರುವುದು ಮಹತ್ವ ಪಡೆದಿದೆ. ದಿಂಗಾಲೇಶ್ವರ ಶ್ರೀಗಳ ಅಸಮಾಧಾನದಿಂದಾಗಿ ಇಂದಿನ ಸಭೆಗೆ ಮತ್ತಷ್ಟು ಪ್ರಾಮುಖ್ಯತೆ ಸಿಕ್ಕಿದೆ.

ಅಲ್ಲದೆ ಸಚಿವ ಲಾಡ್ ಅವರು ಎಲ್ಲಾ ಸಮುದಾಯದ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಬಸವಣ್ಣನವರ ಅನುಯಾಯಿಗಳಾಗಿರುವ ಲಾಡ್ ಅವರು ತಮ್ಮ ಪಕ್ಷದ ಅಭ್ಯರ್ಥಿಯ ಪರ ಸಾಕಷ್ಟು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಲಿಂಗಾಯತ ಸಮುದಾಯದ ಮುಖಂಡರ ವಿಶ್ವಾಸವನ್ನು ಗಳಿಸುವಲ್ಲಿ ಲಾಡ್ ಅವರು ಕಾರ್ಯತಂತ್ರಗಳನ್ನು ರೂಪಿಸಿರುವುದು ಹಾಗೂ ಅಸೂಟಿಯವರ ಪರ ಮತಗಳನ್ನು ಸೆಳೆಯತ್ತಿದ್ದಾರೆ.

ಉದಯ ವಾರ್ತೆ ಧಾರವಾಡ


Share to all

You May Also Like

More From Author