ಹುಬ್ಬಳ್ಳಿ
ವಿಕ್ರುತ ಕಾಮುಕನೊಬ್ಬನನ್ನ ಹಳೇ ಹುಬ್ಬಳ್ಳಿ ಪೋಲೀಸರು ಬಂದಿಸಿದ್ದಾರೆ.ಬಂದಿತ ವಿಕ್ರತ ಕಾಮುಕ ಓಡಿಸ್ಸಾ ರಾಜ್ಯದ ಜಗತ್ ಸಿಂಗ್ ಪುರ ಜಿಲ್ಲೆಯ ಪ್ರವಂಜನ.ಲಕ್ಷ್ಮೀಘರ್ ಪಾಲ ಎಂದು ಗುರುತಿಸಲಾಗಿದೆ.
ಈ ಕಾಮುಕ ಕಳೆದ ಒಂದೂವರೆ ವರ್ಷದ ಹಿಂದೆ ಹುಬ್ಬಳ್ಳಿಗೆ ಬಂದು ನಗರದ ಖಾಸಗಿ ಹೊಟೆಲ್ಲೊಂದರಲ್ಲಿ ಕುಕ್ಕ ಆಗಿ ಕೆಲಸ ಮಾಡುತ್ತಿದ್ದ.
ಹಳೇಹುಬ್ಬಳ್ಳಿ ವ್ಯಾಪ್ತಿಯಲ್ಲಿ ರೂಮ್ ಮಾಡಿಕೊಂಡಿದ್ದ ಕುಕ್ಕ ಕೆಲಸ ಮುಗಿಸಿ ರಾತ್ರಿ ರೂಂಗೆ ಬಂದು ಅಲ್ಲಿ ಬಾಲಕರನ್ನು ಕರೆದು ಅವರಿಗೆ ಚಾಕಲೇಟ್,ಐಸ್ ಕ್ರೀಂ ಹಾಗೂ ಹಣದಾಸೆ ತೋರಿಸಿ ಅವರಿಗೆ ಲ್ಯೆಂಗಿಕ ಕಿರುಕುಳ ಕೊಡತಿದ್ದಾ ಅಷ್ಠೇ ಅಲ್ಲದೇ ಲ್ಯೆಂಗಿಕ ಕಿರುಕುಳ ಕೊಡುವುದನ್ನು ತನ್ನ ಮೋಬ್ಯೆಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ,ಏಕಾಂತದಲ್ಲಿ ನೋಡಿ ಖುಷಿ ಪಡುತ್ತಿದ್ದನಂತೆ.ಅನುಮಾನಗೊಂಡ ಅವನ ರೂಮಿನ ಸುತ್ತಮುತ್ತಲಿನ ಜನ ನೋಡಿ ಅವನ ಮೋಬ್ಯೆಲ್ ಕಸಿದುಕೊಂಡು ನೋಡಿದಾಗ ಅವನ ಬಣ್ಣ ಬಯಲಾಗಿದೆ.ನಂತರ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿ ಪೋಲೀಸರಿಗೆ ಒಪ್ಪಿಸಿದ್ದಾರೆ.
ಇಂತಹದೇ ಇನ್ನೊಂದು ಪ್ರಕರಣ ಬೆಂಡಿಗೇರಿ ಪೋಲೀಸ ಠಾಣೆಯಲ್ಲಿಯೂ ಜರುಗಿದ್ದು ಕಾಮುಕನನ್ನು ಪೋಲೀಸರು ಜ್ಯೆಲಿಗೆ ಅಟ್ಟಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ