ನೇಹಾ ಕೊಲೆ ಮಾಡಿದ ರಾಕ್ಷಸನನ್ನು ಪೋಲೀಸರು ಎನ್ಕೌಂಟರ್ ಮಾಡಬಹುದಿತ್ತು ಕೆ ಎಸ್ ಈಶ್ವರಪ್ಪ.
ಹುಬ್ಬಳ್ಳಿ:- ನೇಹಾ ಹಿರೇಮಠ ಮನೆಗೆ ಭೇಟಿ ನೀಡಿದ ಮಾಜಿ ಮಂತ್ರಿ ಕೆ ಎಸ್ ಈಶ್ವರಪ್ಪ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳ ಬೇಕಿತ್ತು.ಇಂತಹ ಘಟನೆ ನಿಮ್ಮ ಮನೆಯಲ್ಲಿ ಆಗಿದ್ದರೆ ಏನು ಮಾಡತಿದ್ದಿರಿ ಅಂತಾ ಸುರ್ಜೇವಾಲಾ ಹಾಗೂ ಪರಮೇಶ್ವರ ಗೆ ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ ಕೊಲೆ ಮಾಡಿದ ರಾಕ್ಷಸನನ್ನು ಪೋಲೀಸರು ಎನ್ ಕೌಂಟರ್ ಮಾಡಬಹುದಿತ್ತು
ಆದರೆ ರಾಜ್ಯದಲ್ಲಿ ಮುಸುಲ್ಮಾನರನ್ನು ರಕ್ಷಣೆ ಮಾಡುವ ವ್ಯವಸ್ಥೆ ಇದೆ.ಸಿಐಡಿ ತನಿಖೆಯಿಂದ ಪರಿಹಾರ ಸಿಗಲ್ಲ ಈ ಪ್ರಕರಣವನ್ನು ಸಿಬಿಆಯ್ ಗೆ ಕೊಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ.
ಹಿಂದುಗಳ ಕೊಲೆ ಎಂದರೆ ಅವರಿಗೆ ಮಾಮೂಲಿ ಆಗಿದೆ.ನಿಮ್ಮ ಸಾಂತ್ವನಕ್ಕಾಗಿ ಕಾಯೋದಿಲ್ಲಾ.ಕಾನೂನುಬಾರದೇ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡತೇವಿ ಅಂತಾ ಒತ್ತಡ ಹಾಕಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ.