ಮೋರೆ ಫಾರ್ಮ್ ಹೌಸ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಭರ್ಜರಿ ಪ್ರಚಾರ. ಜನರ ಸಮಸ್ಯೆ ಅರಿಯವ ನಾಯಕನಿಗೆ ಮತನೀಡಿ ಅಸೂಟಿ.
ಧಾರವಾಡ:-ಜನರ ಸಮಸ್ಯೆ ಅರಿತು ಕೆಲಸ ಮಾಡುವ ನಾಯಕರಿಗೆ ಮಾತ್ರ ಮತ ನೀಡಬೇಕು. ಆಗ ನಾವು ಮಾಡುವ ಮತದಾನಕ್ಕೆ ಬೆಲೆ ಸಿಗಲಿದೆ. ಜನರ ಸಮಸ್ಯೆ ಅರಿತು ಪರಿಹರಿಸುವ ಜಾಣತನ ಎಲ್ಲರಲ್ಲೂ ಇರಲ್ಲ. ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು ಮನವಿ ಮನವಿ ಮಾಡಿದರು.
ಧಾರವಾಡ ಲೋಕಸಭಾ ವ್ಯಾಪ್ತಿಯ ಧಾರವಾಡ ಪಶ್ಚಿಮ ಮತಕ್ಷೇತ್ರದ ಮೋರೆ ಫಾರ್ಮ್ ಹೌಸ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಧಾರವಾಡ ಪ್ರಬುದ್ಧರ ಜಿಲ್ಲೆ. ಅದೇ ರೀತಿ ಪ್ರಜ್ಞಾವಂತ ಮತದಾರರು ಈ ಬಾರಿ ಯೋಚಿಸಿ ಮತದಾನ ಮಾಡಬೇಕು. ಜನರೊಂದಿಗೆ ಬೆರೆತು ರಾಜಕೀಯ ಮಾಡುವ ವ್ಯಕ್ತಿಗಳು ಸಾರ್ವಜನಿಕ ಜೀವನದಲ್ಲಿರಬೇಕು ಇಲ್ಲದಿದ್ದರೆ ರಾಜಕೀಯ ಜೀವನ ವ್ಯರ್ಥ ಎಂದರು.
ಎಸ್ ಆರ್ ಮೋರೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ “ಸಹೋದರಿ ದಿ.ನೇಹಾ ಹಿರೇಮಠ” ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡುವುದರ ಮೂಲಕ ಎಲ್ಲ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೀರ್ತಿ ಮೋರೆ, ಪುಂಡಲೀಕ, ಎಸ್ ಎ ಪವಾರ, ಅನಿತಾ ಗುಂಜಳ ಹಾಗೂ ಪಕ್ಷದ ಹಿರಿಯ ನಾಯಕರು, ಮಹಿಳೆಯರು ಹಾಗೂ ಎಸ್ ಆರ್ ಮೋರೆ ಅಭಿಮಾನಿ ಬಳಗ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.