ಹುಬ್ಬಳ್ಳಿ ಗಲಭೆ ಪ್ರಕರಣ.ಸಿಎಂ,ಡಿಸಿಎಂ,ಧ್ವಂದ ಹೇಳಿಕೆ ಮದ್ಯೆ ಪ್ರಕರಣ ಹಿಂಪಡೆಯುವ ಎಲ್ಲಾ ಸಿದ್ಧತೆ!

Share to all

ಹುಬ್ಬಳ್ಳಿ ಗಲಭೆ ಪ್ರಕರಣ ಕೇಸ್. ಹಿಂದೆ ಪಡೆಯೊದು ಸರ್ಕಾರದ ಮುಂದಿಲ್ಲ ಅಂತಾರೆ CM.. ಪತ್ರ ಬರೆಯುತ್ತಾರೆ DCM – ಸಚಿವ ಸಂಪುಟದಲ್ಲಿ ತೀರ್ಮಾನ ಆಗಿದೆ ಅಂತಾರೆ ಮಿನಿಸ್ಟರ್,ನೋಡತೇವಿ ಅಂತಾರೆ ಗೃಹ ಸಚಿವರು ಇದೇನಿದು

ಬೆಂಗಳೂರು – ಹುಬ್ಬಳ್ಳಿ ಮತ್ತು ಕೆಜೆ ಹಳ್ಳಿ ಗಲಭೆ ಪ್ರಕರಣ ಕುರಿತಂತೆ ಪ್ರಕರಣಗಳನ್ನು ಹಿಂದೆ ಪಡೆದುಕೊಳ್ಳುವ ವಿಚಾರ ಕುರಿತಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಗೃಹ ಸಚಿವರಿಗೆ ಪತ್ರವನ್ನು ಬರೆದಿದ್ದಾರೆ.ಈ ಒಂದು ಪತ್ರವನ್ನು ಬರೆದ ಬೆನ್ನಲ್ಲೇ ಸಾಕಷ್ಟು ವಿರೋಧದ ಮಾತುಗಳು ವಿರೋಧ ಕೇಳಿ ಬರುತ್ತಿದ್ದು ಇನ್ನೂ ರಾಜ್ಯಾಧ್ಯಂತ ಸಾಕಷ್ಟು ಪ್ರಮಾಣದಲ್ಲಿ ಚರ್ಚೆಯಾಗುತ್ತಿದ್ದು ಇದೆಲ್ಲದರ ನಡುವೆ ಈ ಒಂದು ವಿಚಾರ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಮಾತನಾಡಿ ಈ ಒಂದು ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದೆ ಇಲ್ಲ ಅಂತಹ ಯಾವುದೇ ವಿಚಾರವು ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.ಇನ್ನೂ ಇತ್ತ ಮೈಸೂರಿನಲ್ಲಿ ಸಚಿವ ಹೆಚ್ ಸಿ ಮಹದೇವಪ್ಪ ಮಾತನಾಡಿ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೇಸ್ ವಾಪಸ್ ಪಡೆಯುವ ವಿಚಾರವು ಈಗಾಗಲೇ ಪೈನಲ್ ಆಗಿದೆ ಎಂದು ಮೈಸೂರಿನಲ್ಲಿ ಸಮರ್ಥಿಸಿಕೊಂಡಿದ್ದಾರೆ ಸಚಿವ ಹೆಚ್‌ಸಿ ಮಹದೇವಪ್ಪ. ಅದು ಕ್ಯಾಬಿನೆಟ್ ಸಬ್ ಕಮಿಟಿ ಈ ಬಗ್ಗೆ ವಾಪಸ್ ಪಡೆಯಲು ಶಿಫಾರಸ್ಸು ನೀಡುತ್ತೆ
ಮೆರಿಟ್ ಮೇಲೆ ಕ್ಯಾಬಿನೆಟ್ ಕಮಿಟಿ ಇದನ್ನು ತೀರ್ಮಾನ ಮಾಡುತ್ತೆ ಎಂದಿದ್ದಾರೆ.ಇನ್ನೂ ಇತ್ತ ತುಮಕೂರಿನಲ್ಲಿ ಗೃಹ ಸಚಿವ ಪರಮೇಶ್ವರ ಮಾತನಾಡಿ ಈ ಒಂದು ವಿಚಾರ ಕುರಿತಂತೆ ಈಗಾಗಲೇ ಸಾಕಷ್ಟು ಶಾಸಕರು ಪತ್ರವನ್ನು ಬರೆದಿದ್ದಾರೆ ಈ ಕುರಿತಂತೆ ಸಾಧಕ ಬಾಧಕ ಗಳನ್ನು ಗೃಹ ಇಲಾಖೆ ಪರಿಶೀಲನೆ ಮಾಡುತ್ತದೆ ಎಂದಿದ್ದಾರೆ.ಹೀಗಾಗಿ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸಚಿವರು ನಡುವೆ ತಾಳ ಮೇಳ ಇಲ್ಲದಂತಾಗಿದೆ.

  • ಉದಯ ವಾರ್ತೆ ಹುಬ್ಬಳ್ಳಿ

Share to all

You May Also Like

More From Author