ಸ್ವಾಮೀಜಿಗಳಿಗೆ ಜೋಶಿ ಪ್ಯಾಕೇಟ್ ಕೊಡತಿದ್ದಾರೆ ದಿಂಗಾಲೇಶ್ವರ ಶ್ರೀ ಗಂಭೀರ ಆರೋಪ.ನನ್ನ ಬಳಿ ವಿಡಿಯೋ ಇದೆ ದಿಂಗಾಲೇಶ್ವರ.
ಹುಬ್ಬಳ್ಳಿ:-ಚುನಾವಣಾ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರು ಮಠಗಳಿಗೆ ಹೋಗಿ ಸ್ವಾಮೀಜಿಗಳಿಗೆ ಪ್ಯಾಕೇಟ್ ಕೊಡಲು ಆರಂಭಿಸಿದ್ದಾರೆ. ಅವರು ಪ್ಯಾಕೇಟ್ ಕೊಡುವ ವಿಡಿಯೋ ನನ್ನ ಬಳಿ ಇದೆ ಎಂದು ದಿಂಗಾಲೇಶ್ವರ ಸ್ವಾಮಿಗಳು ಜೋಶಿ ಅವರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು ಲಿಂಗಾಯತರ ಅವನತಿಗಾಗಿಯೇ ಹುಟ್ಟಿಕೊಂಡ ಶಕ್ತಿಯೇ ಜೋಶಿ.ಜೋಶಿ ಅವರು 20 ವರ್ಷದಲ್ಲಿ ಲಿಂಗಾಯತರು,ಹಿಂದುಳಿದವರನ್ನು ತುಳಿದಿದ್ದೇ ಅವರ ಅಭಿವೃದ್ಧಿ. ಅದನ್ನು ಅವರ ಹಿಂಬಾಲಿಕರು ಉತ್ತರಿಸಲಿ ಜೋಶಿ ಅವರು ಅವರನ್ನ ತುಳಿದಿಲ್ಲಾ ಅಂತಾ.ಜೋಶಿ ಅವರು ತಮ್ಮ ಸಮಾಜದವರಿಗೆ ಎಷ್ಟು ಕೆಲಸ ಕೊಡಿಸಿದ್ದಾರೆ.ಉಳಿದ ಸಮಾಜದವರಿಗೆ ಎಷ್ಟು ಕೆಲಸ ಕೊಡಿಸಿದ್ದಾರೆ ಅಂತಾ ಹೇಳಲಿ ಎಂದರು.
ಅಲ್ಲದೇ ಜೋಶಿ ಅವರು ಒಂದು ಮಠವನ್ನ ಎರಡು ಮಠ ಮಾಡುವ ಕೆಲಸಕ್ಕೆ ಕೈ ಹಾಕಿದ್ದೀರಿ. ನಿಮಗೆ ಮಾನ ಮರ್ಯಾದೆ ಇದ್ದರೆ ನಿಮ್ಮ ಹುಚ್ಚು ಸಾಹಸವನ್ನು ಕೈ ಬಿಡಿ ಎಂದು ಗರಂ ಆದ ದಿಂಗಾಲೇಶ್ವರ ಸ್ವಾಮಿಗಳು ನೀವು ಸಂಸದರಾದ ಮೇಲೆ ನಮ್ಮ ಸಂಸ್ಕೃತಿ ಪರಂಪರೆ ನಾಶ ಆಗಿದೆ ಎಂದು ಆರೋಪ ಮಾಡಿದ್ದಾರೆ.