ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಓರ್ವ ಮಹಿಳಾ ಪೇದೆ ಅಮಾನತ್ತು.ಕಮೀಷನರ್ ಆದೇಶ.
ಹುಬ್ಬಳ್ಳಿ:-ಅಂಜಲಿ ಕೊಲೆ ಆಗೋ ಕೆಲದಿನಗಳ ಹಿಂದೆ ಅಂಜಲಿ ಅಜ್ಜಿ ಪೋಲೀಸ ಠಾಣೆಗೆ ಹೋಗಿ ಆರೋಪಿ ಧಮಕಿ ಹಾಕಿರೋ ಬಗ್ಗೆ ಮಾಹಿತಿ ನೀಡಿದ್ದರೂ ಅಂದು ಕರ್ತವ್ಯದಲ್ಲಿದ್ದ ಪೋಲೀಸ ಇನಸ್ಪೆಕ್ಟರ್ ಚಿಕ್ಕೋಡಿ ಹಾಗೂ ಮಹಿಳಾ ಪೇದೆಯೋರ್ವ ಕರ್ತವ್ಯದಲ್ಲಿ ನಿರ್ಲಕ್ಷ ತೋರಿದ ಆರೋಪದ ಮೇಲೆ ಅಮಾನತ್ತು ಮಾಡಲಾಗಿದೆ ಎಂದು ಹುಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ತಿಳಿಸಿದ್ದಾರೆ.
ಮೊದಲೇ ಅಂಜಲಿ ಅಜ್ಜಿ ಬೆಂಡಿಗೇರಿ ಪೊಲೀಸ್ ಠಾಣೆಗೆ ಬಂದು ಬೆದರಿಕೆ ಇದೆ ಎಂದು ದೂರು ನೀಡಿದ್ರು.
ದೂರು ನೀಡಿದ್ರು ಪೊಲೀಸರು ನಿರ್ಲಕ್ಷ್ಯ ಮಾಡಿರೋ ಆರೋಪ ಕೇಳಿ ಬಂದಿತ್ತು.ಈ ಹಿನ್ನಲೆ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಿ.ಬಿ ಚಿಕ್ಕೋಡಿ ಹಾಗೂ ಮಹಿಳಾ ಪೊಲೀಸ್ ಪೇದೆ ರೇಖಾ ಅವರನ್ನು
ಅಮಾನತ್ತು ಮಾಡಿ ರೇಣುಕಾ ಸುಕುಮಾರ ಆದೇಶ ಹೊರಡಿಸಿದ್ದಾರೆ.