ನನ್ನ ಮಗನಿಗೆ ನ್ಯಾಯಾಲಯ ಏನು ಶಿಕ್ಷೆ ಕೊಡುತ್ತೋ ಕೊಡಲಿ.ಅವನಿಂದ ನಮ್ಮ ಮಾನ ಮರ್ಯಾದೆ ಎಲ್ಲಾ ಹೋಗಿದೆ.ಅಂಜಲಿ ಹಂತಕನ ತಾಯಿ ಅಳಲು.

Share to all

ನನ್ನ ಮಗನಿಗೆ ನ್ಯಾಯಾಲಯ ಏನು ಶಿಕ್ಷೆ ಕೊಡುತ್ತೋ ಕೊಡಲಿ.ಅವನಿಂದ ನಮ್ಮ ಮಾನ ಮರ್ಯಾದೆ ಎಲ್ಲಾ ಹೋಗಿದೆ.ಅಂಜಲಿ ಹಂತಕನ ತಾಯಿ ಅಳಲು.

ಹುಬ್ಬಳ್ಳಿ:-ನನ್ನ ಮಗ ಮಾಡಿದ್ದು ತಪ್ಪೇ.ಅವನಿಗೆ ನ್ಯಾಯಾಲಯ ಏನು ಶಿಕ್ಷೆ ಕೊಡುತ್ತೋ ಕೊಡಲಿ ಅವನಿಂದ ನಮ್ಮ ಮಾನ ಮರ್ಯಾದೆ ಎಲ್ಲಾ ಹಾಳಾಗಿ ಹೋಗಿದೆ ಎಂದು ಅಂಜಲಿ ಹಂತಕ ಗಿರೀಶ ತಾಯಿ ಶ್ವೇತಾ ಹೇಳಿದ್ದಾಳೆ.

ಅವನನ್ನು ಕಿಮ್ಸ್ ಆಸ್ಪತ್ರೆಗೆ ಕರೆತಂದಿದ್ದರೂ ನಾನು ನೋಡಲು ಹೋಗಿಲ್ಲಾ ಹೋಗುವುದೂ ಇಲ್ಲಾ.ಅವನು ಈ ಹಿಂದೆ ಬೈಕ್ ಕಳ್ಳತನ ಮಾಡಿದ್ದು ಗೊತ್ತಿತ್ತು.ಅವನಿಗೆ ಅವಾಗ ನಾನೇ ಸಹಾಯ ಮಾಡಿದ್ದೇ. ಎಷ್ಟೇ ಬುದ್ದಿವಾದ ಹೇಳಿದರೂ ಕೇಳ್ತಿರಲಿಲ್ಲಾ.ಆರು ತಿಂಗಳುಗಳಿಂದ ಆತ ನಮ್ಮ ಮನೆಗೆ ಬಂದಿರಲಿಲ್ಲಾ.

ಮಗ ಮಾಡಿದ ತಪ್ಪಿಗೆ ಈಗ ಮನೆ ಓನರ್ ಕೂಡಾ ನಮ್ಮನ್ನು ಮನೆ ಬಿಡು ಅಂತಿದ್ದಾರೆ.ಏನು ಮಾಡಬೇಕೆಂದು ತೋಚುತ್ತಿಲ್ಲಾ ಎಂದು ಅಳಲು ತೋಡಿಕೊಂಡಿದ್ದಾಳೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author