7ನೇ ವೇತನ ಆಯೋಗ ಜಾರಿ ಮಾಡಿ,18 ತಿಂಗಳ ತುಟ್ಟಿ ಭತ್ಯೆ ನೀಡುವಂತೆ CM ಗೆ ಮನವಿ

Share to all

ಶೀಘ್ರದಲ್ಲೇ 7ನೇ ವೇತನ ಆಯೋಗ ಜಾರಿ ಮಾಡಿ,18 ತಿಂಗಳ ತುಟ್ಟಿ ಭತ್ಯೆ ನೀಡುವಂತೆ CM ಗೆ ಮನವಿ.

ರಾಯಚೂರು –

ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರಿಷ್ಕರಣೆಗೆ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದೆ.ಸಮಿತಿ ಕೂಡಾ ವರದಿಯನ್ನು ಸಿದ್ದಪಡಿಸಿ ಪೈನಲ್ ಟಚ್ ನೀಡುತ್ತಿದ್ದು ಇದರ ನಡುವೆ ಇತ್ತ ರಾಜ್ಯದಲ್ಲಿ ಏಳನೇ ವೇತನ ಆಯೋಗದ ಪರಿಷ್ಕರಣೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದಿಂದ ಪ್ರತಿಭಟನೆಯನ್ನು ಮಾಡಲಾಯಿತು.ನಗರದಲ್ಲಿ ರಾಜ್ಯ ಸಮಿತಿಯ ವತಿಯಿಂದ ನೌಕರರು ಪ್ರತಿಭಟನೆಯನ್ನು ಮಾಡಿದರು.ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ನಗರಸಭೆ , ತಹಶೀಲ್ದಾರ್‌ ಕಚೇರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.ಪಿ,ಎಫ್‌, ಆರ್‌ಡಿಎ ಕಾಯ್ದೆ, ಎನ್‌ಪಿಎಸ್ ಪದ್ಧತಿ, 7ನೇ ವೇತನ ಆಯೋಗ ಅನುಷ್ಠಾನ, ಖಾಲಿ ಹುದ್ದೆ ಭರ್ತಿ, ಹೊರಗುತ್ತಿಗೆ ನೌಕರರ ಕಾಯಂ, ರಾಜ್ಯ ಸರ್ಕಾ ವು ಕೋವಿಡ್ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ 18 ತಿಂಗಳ ತುಟ್ಟಿ ಭತ್ಯೆ ಕೊಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಸಾರ್ವಜನಿಕ ಉದ್ದಿಮೆಗಳು ಖಾಸಗೀಕರಣ ನಿಲ್ಲಿಸಬೇಕು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಬೇಕು ಕೇಂದ್ರ,ಹಾಗೂ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 60 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.ಈ ಒಂದು ಪ್ರತಿಭಟನೆಯಲ್ಲಿ ರಾಜ್ಯ ಸಮಿತಿಯ ಅದ್ಯಕ್ಷ ಹೆಚ್.ಎಸ್.ಜೈಕುಮಾರ, ಕಾರ್ಯಾಧ್ಯಕ್ಷೆ ಶೋಭಾ ಲೋಕನಾಗಣ್ಣ, ಅಮರೇಶಪ್ಪ, ನಾರಾಯಣಪ್ಪ,ಜಿಲ್ಲಾ ಘಟಕದ ಅಧ್ಯಕ್ಷ ತಾಯರಾಜ್ ,ಮೊಹಿನುದ್ದಿನ್, ಗುರುನಾಥ, ರಮೇಶ್ ಗೌಳಿ, ಸುಧಾಕರ, ಮಹದೇವಪ್ಪ, ಮಧುಕಾಂತ, ವೆಂಕಟೇಶ, ರಾಘವೇಂದ್ರ, ಹೃಷಿಕೇಶ, ನಾಗರಾಜ್, ಸತ್ಯ ನಾರಾಯಣ ಸೇರಿದಂತೆ ಹಲವು ನೌಕರರು ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.

ಉದಯ ವಾರ್ತೆ ರಾಯಚೂರ


Share to all

You May Also Like

More From Author