ಅಂಜಲಿ ಹತ್ಯೆ ಪ್ರಕರಣ. ಹುಬ್ಬಳ್ಳಿಗೆ ಆಗಮಿಸಿದ ಸಿಐಡಿ ತಂಡ.ಸಿಐಡಿ ಎಸ್ ಪಿ ವೆಂಕಟೇಶ ನೇತೃತ್ವ ತಂಡ ಆಗಮನ.
ಹುಬ್ಬಳ್ಳಿ:-ಅಂಜಲಿ ಹತ್ಯೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿದ ಹಿನ್ನೆಲೆಯಲ್ಲಿ ಸಿಐಡಿ ಟೀಂ ಹುಬ್ಬಳ್ಳಿಗೆ ಆಗಮಿಸಿದೆ.ಸಿಐಡಿ ಎಸ್ ಪಿ ವೆಂಕಟೇಶ ನೇತೃತ್ವದ ಒಟ್ಟು ಒಂಬತ್ತು ಅಧಿಕಾರಿಗಳು ಹುಬ್ಬಳ್ಳಿಗೆ ಬಂದಿದ್ದಾರೆ.
ನಿನ್ನೆ ಹುಬ್ಬಳ್ಳಿಗೆ ಆಗಮಿಸಿದ್ದ ಹೋಮ್ ಮಿನಿಸ್ಟರ್ ಜಿ.ಪರಮೇಶ್ವರ ಅವರು ಅಂಜಲಿ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದ ಬೆನ್ನಲ್ಲೇ ಇಂದು ಸಿಐಡಿ ಟೀಮ್ ಹುಬ್ಬಳ್ಳಿಗೆ ಬಂದಿದೆ.
ಸದ್ಯ ನೇಹಾ ಹಿರೇಮಠ ಹತ್ಯೆ ತನಿಖೆಯನ್ನು ಸಹ ಇದೆ ಎಸ್ ಪಿ ವೆಂಕಟೇಶ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು ಆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯವಾಗಿದ್ದು ಚಾಜ್೯ ಸೀಟ್ ಸಲ್ಲಿಕೆ ಮಾತ್ರ ಬಾಕಿ ಉಳಿದಿದ್ದು ಈಗ ಅಂಜಲಿ ಪ್ರಕರಣವನ್ನು ತನಿಖೆ ಮಾಡತಿದ್ದಾರೆ.