ಸರಕಾರದ ವರ್ಗಾವಣೆ ಮಾರ್ಗಸೂಚಿ.ಈ ಬಾರಿಯಾದರೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಅನ್ವಯವಾಗುತ್ತಾ..ಧಾರವಾಡ ಪೇಡಾ ತಿನ್ನುತ್ತಾ ಒಂದೇ ಕಡೆ ಸುಮಾರು ವರ್ಷಗಳಿಂದ ಠಿಕಾಣಿ ಹೂಡಿದ ಅಧಿಕಾರಿಗಳಿಗೆ ಸುರುವಾಯಿತು ಡವ ಡವ..

Share to all

ಸರಕಾರದ ವರ್ಗಾವಣೆ ಮಾರ್ಗಸೂಚಿ.ಈ ಬಾರಿಯಾದರೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಅನ್ವಯವಾಗುತ್ತಾ..ಧಾರವಾಡ ಪೇಡಾ ತಿನ್ನುತ್ತಾ ಒಂದೇ ಕಡೆ ಸುಮಾರು ವರ್ಷಗಳಿಂದ ಠಿಕಾಣಿ ಹೂಡಿದ ಅಧಿಕಾರಿಗಳಿಗೆ ಸುರುವಾಯಿತು ಡವ ಡವ..

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಜ್ಯದಲ್ಲಿಯೇ ಎರಡನೇ ದೊಡ್ಡ ಮಹಾನಗರ ಪಾಲಿಕೆ.ಆದರೆ ಈ ಮಹಾನಗರ ಪಾಲಿಕೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಧಾರವಾಡ ಪೇಡಾ ತಿನ್ನುತ್ತಾ ಠಿಕಾಣಿ ಹೂಡಿದ್ದಾರೆ.

ಒಂದೇ ಜಾಗದಲ್ಲಿ ಹಲವಾರು ವರ್ಷಗಳಿಂದ ಬೀಡುಬಿಟ್ಟಿರುವ ಅಧಿಕಾರಿಗಳ ಮಾಹಿತಿ ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಇದ್ದಂಗಿಲ್ಲಾ.ಇದ್ದಿದ್ದರೆ ಪ್ರಶ್ನೆ ಮಾಡುತ್ತಿದ್ದರು.ಹಲವು ವರ್ಷಗಳಿಂದ ಪಾಲಿಕೆಯಲ್ಲಿರುವ ಅಧಿಕಾರಿಗಳು ಪಾಲಿಕೆ ಅವರದೇ ಆಸ್ತಿ ಅನ್ನೋ ತರಹ ನಡೆದುಕೊಳ್ಳುತ್ತಿದ್ದಾರೆ.ಇಂತಹ ಅಧಿಕಾರಿಗಳ ಸಂಪೂರ್ಣ ಮಾಹಿತಿ ಪಡೆದು ಈ ವರ್ಷದ ವರ್ಗಾವಣೆ ಮಾರ್ಗಸೂಚಿಯಂತೆ ವರ್ಗಾವಣೆ ಆಗತಾರಾ ಕಾದು ನೋಡಬೇಕಾಗಿದೆ.

ಮಹಾನಗರ ಪಾಲಿಕೆಯಲ್ಲಿ ಹಲವು ವರ್ಷಗಳಿಂದ ಠಿಕಾಣಿ ಹೂಡಿರುವ ಅಧಿಕಾರಿಗಳ ಪಟ್ಟಿಯನ್ನು ನಾಳೆ ಉದಯ ವಾರ್ತೆಯಲ್ಲಿ ನಿರೀಕ್ಷಿಸಿ.

ಉದಯ ವಾರ್ತೆ
ಹುಬ್ಬಳ್ಳಿ.

Share to all

You May Also Like

More From Author