IAS ಕನಸು ಕಂಡಿದ್ದ ಅಂಧ ಸಾಧಕಿ ಮಾನಸ…ಕನಸುಗಳೊಂದಿಗೆ ಮಣ್ಣಲ್ಲಿ ಮಣ್ಣಾದ ಕಣ್ಣಿಲ್ಲದ ಸಾಧಕಿ..ಅಯ್ಯೋ ದೇವರೇ ಇದೆಂತಹ ದುರ್ಘಟನೆ..

Share to all

IAS ಕನಸು ಕಂಡಿದ್ದ ಅಂಧ ಸಾಧಕಿ ಮಾನಸ…ಕನಸುಗಳೊಂದಿಗೆ ಮಣ್ಣಲ್ಲಿ ಮಣ್ಣಾದ ಕಣ್ಣಿಲ್ಲದ ಸಾಧಕಿ..ಅಯ್ಯೋ ದೇವರೇ ಇದೆಂತಹ ದುರ್ಘಟನೆ..

ಶಿವಮೊಗ್ಗ:- ಇಂದು ಬೆಳ್ಳಂ ಬೆಳೆಗ್ಗೆ ಹಾವೇರಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹದಿಮೂರು ಜನ ಸಾವನ್ನಪ್ಪಿದ್ದರಲ್ಲಿ IAS ಕನಸು ಕಂಡಿದ್ದ ಮಾನಸ ಕೂಡಾ ಸಾವನ್ನಪ್ಪಿದ್ದಾಳೆ.

ಮಾನಸ ಹುಟ್ಟು ಕುರುಡಿ ಆದರೆ ಆಕೆಯ ಸಾಧನೆಯನ್ನ ಇಡೀ ಪ್ರಪಂಚವೇ ನೋಡಬೇಕು ಎಂಬ ಮಹದಾಸೆ ಹೊಂದಿದವಳು.ವಿದ್ಯಾಬ್ಯಾಸದಲ್ಲಿ ಎಂಎಸ್ ಸಿ ಪದವಿ ಪಡೆದು ಬೆಂಗಳೂರಿನಲ್ಲಿ IAS ಕೋಚಿಂಗ್ ಪಡೆದುಕೊಳ್ಳುತ್ತಿದ್ದಳು.

ಅಷ್ಠೆ ಅಲ್ಲದೇ ಮಾನಸ ಭಾರತ ತಂಡದ ಅಂಧರ ಪುಟ್ಬಾಲ್ ತಂಡದ ನಾಯಕಿಯಾಗಿದ್ದು ದೇಶ ವಿದೇಶಗಳಲ್ಲಿ ಪುಟ್ಬಾಲ್ ಆಡಿದ ಮಾನಸ ಪ್ರತಿಭೆ ಅರಳುವ ಮೊದಲೇ ಬಾಡಿ ಹೋಗಿದೆ.

ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಾನಸ ಸಾವನ್ನಪ್ಪಿದ್ದು ಇಡೀ ಗ್ರಾಮವೇ ಮಮ್ಮಲ ಮರಗುವಂತೆ ಮಾಡಿದೆ.

ಉದಯ ವಾರ್ತೆ
ಶಿವಮೊಗ್ಗ


Share to all

You May Also Like

More From Author