ಬಾಲಕ ಮಾಡಿದ ತಪ್ಪಿಗೆ ಪೋಷಕರಿಗೆ ಬಿತ್ತು ದಂಡ..ಅಪ್ರಾಪ್ತರ ಕೈಗೆ ವಾಹನ ಕೊಡುವ ಪಾಲಕರು ನೋಡಲೇ ಬೇಕಾದ ಸ್ಟೋರಿ..
ಹುಬ್ಬಳ್ಳಿ:- ಪಾಲಕರು ಅಪ್ರಾಪ್ತ ಮಕ್ಕಳಿಗೆ ದ್ವಿಚಕ್ರ ಹಾಗೂ ಕಾರುಗಳನ್ನು ಕೊಡುವಾಗ ವಿಚಾರ ಮಾಡಿ ಕೊಡಿ..ಹುಬ್ಬಳ್ಳಿ ಪೋಲೀಸರ ಕೈಗೆ ಸಿಕ್ಕರೆ ಮುಗೀತು ಬಾಲಕನಿಗೆ ಅಲ್ಲಾ ವಾಹನ ಕೊಟ್ಟ ಪೋಷಕರಿಗೆ ದಂಡ ಬೀಳುವುದು ಗ್ಯಾರಂಟಿ..
ನಿನ್ನೆ ದಕ್ಷಿಣ ಸಂಚಾರಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಬಾಲಕನೊಬ್ಬ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಪೋಲೀಸರ ಕೈಗೆ ಸಿಕ್ಕಾಕಿಗೊಂಡಿದ್ದಾನೆ.. ಪ್ರಕರಣ ದಾಖಲಿಸಿಕೊಂಡ ಪೋಲೀಸರು ನ್ಯಾಯಾಲಯಕ್ಕೆ ಕಳಿಸಿದ್ದರು.
ಹುಬ್ಬಳ್ಳಿಯ ಒಂದನೇ JMFC ನ್ಯಾಯಾಲಯ ಅಪ್ರಾಪ್ತ ಬಾಲಕನಿಗೆ ವಾಹನ ನೀಡಿದ ಪೋಷಕರಿಗೆ 25 ಸಾವಿರ ದಂಡ ವಿಧಿಸಿ ಆದೇಶ ಮಾಡಿದೆ..