ಕಳೆದ ವರ್ಷ ಅಟ್ಯಾಕ್ ಮಾಡಿದ್ದ ದುಷ್ಕರ್ಮಿಗಳು.ಅಂದು ಉಳಿದಿದ್ದರು.ಆದರೆ ಇಂದು ಬಿಡಲಿಲ್ಲಾ ದುಷ್ಕರ್ಮಿಗಳು.. ಮಟಾಷ್ ಆದ ಸ್ವಾಮೀಜಿ..
ಹುಬ್ಬಳ್ಳಿ: ಈಶ್ವರನಗರದ ವೈಷ್ಣೋದೇವಿ ಮಂದಿರದ ಪೂಜಾರಿ ಶ್ರೀ ದೇವಪ್ಪಜ್ಜ ಕುಸುಗಲ್ ಅವರನ್ನ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನಡೆದಿದೆ.
ದೇವಸ್ಥಾನದ ಮುಂಭಾಗದಲ್ಲೇ ಹೊಡೆದು ಪರಾರಿಯಾಗಿರುವ ಆರೋಪಿಗಳು, ಸ್ಥಳೀಯರು ದೇವಪ್ಪಜ್ಜ ಅವರನ್ನ ಕಿಮ್ಸಗೆ ರವಾನೆ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ.ಈ ಸ್ವಾಮೀಜಿಯ ಮೇಲೆ ದುಷ್ಕರ್ಮಿಗಳು ಕಳೆದ ವರ್ಷ ಅಟ್ಯಾಕ್ ಮಾಡಿದ್ದರು.ಅದೃಷ್ಟವಶಾತ್ ಅಂದು ಏನೂ ಆಗಿರಲಿಲ್ಲಾ..ಇಂದು ಸ್ವಾಮೀಜಿಯನ್ನ ಹೊಡೆದೇ ಬಿಟ್ಟರು..
ನವನಗರ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೋಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.