Dhruva Sarja: ದರ್ಶನ್‌ ಪ್ರಕರಣದ ಕುರಿತು ನಟ ಧ್ರುವ ಸರ್ಜಾ ಏನಂದ್ರು ಗೊತ್ತಾ..?

Share to all

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ವಿಚಾರವಾಗಿ ಪರಪ್ಪನ ಜೈಲಿನಲ್ಲಿರುವ ನಟ ದರ್ಶನ್ ಬಗ್ಗೆ ಹಲವು ನಟ, ನಟಿಯರು ಪ್ರತಿಕ್ರಿಯೆ ನೀಡಿದ್ದರು. ಈಗ ಮೊದಲ ಬಾರಿಗೆ ದರ್ಶನ್ ಪ್ರಕರಣದ ಕುರಿತು ಧ್ರುವ ಸರ್ಜಾ ಮಾತನಾಡಿದ್ದು, ಕೇಸ್ ಕೋರ್ಟ್‌ನಲ್ಲಿದೆ. ಕಾನೂನು ಮುಂದೆ ಯಾರೂ ದೊಡ್ಡವರಲ್ಲ ಎಂದಿದ್ದಾರೆ. ನೋಡೋಣ ಈ ಕೇಸ್ ಮುಂದೆ ಏನಾಗುತ್ತೆ ಅಂತ ಎಂದು ಹೇಳಿದ್ದಾರೆ. ಇನ್ನೂ ಯಾರೋ ಒಬ್ಬರು ನೋವಲ್ಲಿದ್ದಾರೆ.

ಯಾರೋ ಕುಗ್ಗಿದ್ದಾರೆ ಅಂತ ನಾವು ಏನೇನೋ ಮಾತನಾಡೋಕೆ ಆಗಲ್ಲ. ಗುಂಪಲ್ಲಿ ಗೋವಿಂದ ನಂದು ಒಂದಿರಲಿ ಅಂತ ನಾನೇನೇನೋ ಮಾತನಾಡಲ್ಲ ಎಂದಿರುವ ಧ್ರುವ ಸರ್ಜಾ, ದರ್ಶನ್ ಸರ್ ಅವರಿಗೂ ಒಬ್ಬ ಮಗ ಇದ್ದಾನೆ, ಅವರಿಗೂ ಒಂದು ಫ್ಯಾಮಿಲಿ ಇದೆ.. ರೇಣುಕಾ ಸ್ವಾಮಿ ಅವರಿಗೂ ಒಂದು ಕುಟುಂಬ ಇದೆ ಎಂದಿದ್ದಾರೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ , ಮೊದಲು ನಿರ್ಧಾರವಾಗಲಿ.. ನಾವು ಏನೇನೋ ಮಾತನಾಡುವುದು ಬೇಡ ಅಂದಿದ್ದಾರೆ.


Share to all

You May Also Like

More From Author