ಹುಬ್ಬಳ್ಳಿಯಲ್ಲಿ ಗ್ಯಾಂಗ್ ವಾರ್.ಓರ್ವನ ಸ್ಥಿತಿ ಚಿಂತಾಜನಕ.

Share to all

ಹುಬ್ಬಳ್ಳಿ
ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬವನ್ನು ಸಕ್ಷಸ್ ಮಾಡಿದ್ದ ಖಡಕ್ ಪೋಲೀಸ ಕಮೀಷನರ್ ಗೆ ಈಗ ಹುಬ್ಬಳ್ಳಿ-ಧಾರವಾಡದಲ್ಲಿ ಚಾಲೇಂಜ್ ಆಗಿದ್ದು ಈ ರೌಡಿಗಳ ಮಟ್ಟ ಹಾಕುವುದು.

ನಿನ್ನೆ ರಾತ್ರಿ ಹುಬ್ಬಳ್ಳಿಯ ಗಬ್ಬೂರನ RTO ಕಛೇರಿ ಬಳಿ ಅಣ್ಣಿಗೇರಿಯ ಯುವಕನೊಬ್ಬನನ್ನು ತಂದು ಮದ್ಯಾಹ್ನ 4-00 ಘಂಟೆಯಿಂದ ಸಾಯಂಕಾಲದವರೆಗೆ ಮನಸ್ಸೋ ಇಚ್ಚೇ ಥಳಿಸಿದ್ದೇ ಈ ಗಲಾಟೆಗೆ ಕಾರಣ ಎನ್ನಲಾಗಿದೆ.ಅಣ್ಣೀಗೇರಿಯ ಯುವಕನನ್ನು ತಂದು ಥಳಿಸುವ ಹಿಂದೆ ಬೆಂಕಿ….ಮಾ….ಲವ್ ಸ್ಟೋರಿಯೇ ಕಾರಣ ಎನ್ನಲಾಗುತ್ತಿದೆ.ಅಣ್ಣೀಗೇರಿ ಯುವಕನಿಗೆ ಸೋಮನಗೌಡ ಸಪೋಟ್ ಮಾಡಿದ್ದಾನೆ ಅಂತಾ ಅವನಿಗೆ ಚಾಕು ಇರಿದು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.ಅಣ್ಣೀಗೇರಿ ಹುಡುಗನ ಥಳಿಸಿದ್ದು ಒಬ್ಬರಲ್ಲಾ ಇಬ್ಬರಲ್ಲಾ.ಹೊನ್ನಪ್ಪ ಸೇರಿದಂತೆ ಐವತ್ತಕ್ಕೂ ಹೆಚ್ಚು ದಾಂಡಿಗರಿಂದ ಅಂತೆ.. ಕಳೆದ ರಾತ್ರಿ ಇಷ್ಟೊಂದು ಜನರು ಒಬ್ಬನ ಮೇಲೆ ಹಲ್ಲೆ ಮಾಡಿ ಗಬ್ಬೂರಿನ ಜನರಲ್ಲಿ ಭಯ ಹುಟ್ಟಿಸಿದ ರೌಡಿ ಸೀಟರ್ ಗಳು
ಸೋಮನಗೌಡನ ಹುಡುಕಿಕೊಂಡು ಹೋಗಿ ಅವನ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಹೊನ್ನಪ್ಪನಿಗೂ ಗಾಯವಾಗಿದೆ.ಆದರೆ ಸೋಮನಗೌಡನಿಗೂ ಮೇಜರ್ ಚಾಕು ಇರಿತವಾದ ಹಿನ್ನೆಲೆಯಲ್ಲಿ ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಚಾಕು ಇರಿತ ಪ್ರಕರಣದಲ್ಲಿ ಎರಡೂ ಕಡೆಯಿಂದ ದೂರು ಪ್ರತಿದೂರು ದಾಖಲಾಗಿದ್ದು ಬೆಂಡಿಗೇರಿ ಪೋಲೀಸರು ಪ್ರಕರಣದ ಹಿಂದೆ ಮುಂದೆ ಜಾಲಾಡುತ್ತಿದ್ದಾರೆ.ಈ ಹಿಂದೆ ಬೆತ್ತಲೆ ಪ್ರಕರಣ ಜಾಲಾಡಿ ರೌಡಿಗಳ ಮಟ್ಟ ಹಾಕಿದ್ದ ಬೆಂಡಿಗೇರಿ ಪೋಲೀಸರು ಜನರಿಂದ ಮೆಚ್ಚುಗೆ ಪಡೆದಿದ್ದು ಈ ಪ್ರಕರಣದಲ್ಲೂ ಪೋಲೀಸರು ರೌಡಿಗಳ ಮಟ್ಟ ಹಾಕತಾರೆ ಅನ್ಬೋ ವಿಶ್ವಾಸ ಜನರಲ್ಲಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author