ಫುಟ್ಬಾಲ್ ಪಂದ್ಯದ ವೇಳೆ ಸ್ಟ್ಯಾಂಡ್ ಕುಸಿತ: ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ!

Share to all

ಬೆಂಗಳೂರು:- ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದ್ದು, ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ ವೇಳೆ ಉತ್ತರ ಸ್ಟ್ಯಾಂಡ್‌ನ ಕೆಳಗಿನ ಭಾಗ ಕುಸಿದು, ಹಲವರು ಗಾಯಗೊಂಡಿದ್ದಾರೆ.

ಹೌದು, ಅಶೋಕ್ ನಗರದಲ್ಲಿರುವ ಮೈದಾನದಲ್ಲಿರುವ ಫುಟ್ಬಾಲ್ ಮೈದಾನದಲ್ಲಿ ಈ ಅವಘಡ ಸಂಭವಿಸಿದೆ. ಈ ಪಂದ್ಯವನ್ನು ಜನತೆ ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ ಪುಟ್ಬಾಲ್ ಅಭಿಮಾನಿಗಳು ನಿಂತಿದ್ದ ಆಡಿಯನ್ಸ್ ಸ್ಟ್ಯಾಂಡ್ ಕುಸಿತ ಆಗಿದೆ. ಘಟನೆಯಿಂದ ಹಲವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಶೋಕ್ ನಗರದಲ್ಲಿರುವ ಫುಟ್ಬಾಲ್ ಮೈದಾನ ಇದಾಗಿದ್ದು, ರಾಜ್ಯ ಸರ್ಕಾರ ಅಧೀನದಲ್ಲಿದೆ. ಮೊನ್ನೆ ಪಂದ್ಯಾವಳಿ ನಡೆಯುವ ವೇಳೆ ಕುಸಿತ ಆಗಿದ್ದು, ಭಾರೀ ಅನಾಹುತ ತಪ್ಪಿದೆ.

ಕೂದಲೆಳೆಯ ಅಂತರದಲ್ಲಿ ದುರಂತ ತಪ್ಪಿದ್ದು, ಆವತ್ತಿನ ಕಾರ್ಯಕ್ರಮಕ್ಕೆ ಸಿಎಂ ಬರ್ಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿಎಂ ಬರೋದು ಕ್ಯಾನ್ಸಲ್ ಆಗಿತ್ತು. ಬಟ್ ಸಿಎಂ ಬಂದಿದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರ್ತಿದ್ರು. ಇದರಿಂದ ಮತ್ತಷ್ಟು ಜನರು ಗಂಭೀರ ಗಾಯಗೊಳ್ತಿದ್ದ ಆತಂಕ ಇತ್ತು. ಮೊನ್ನೆ ಘಟನೆಯಲ್ಲಿ 10 ಜನರಿಗೆ ಗಾಯವಾಗಿದೆ.

ಇನ್ನೂ ಘಟನೆಯಿಂದಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್ ಎನ್ನಲಾಗಿದೆ. ಘಟನೆಯಿಂದ ಗೋಡೆಗಳು ಬಿರುಕು ಬಿಟ್ಟಿದ್ದು, ಕಬ್ಬಿಣದ ರಾಡ್ ಗಳು ಹೊರಗೆ ಬಂದಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಖದಿದ್ರೆ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.


Share to all

You May Also Like

More From Author