ಮಾಜಿ ಹೆಂಡ್ತಿ ಫೋಟೋಗೆ ಹಾರ್ದಿಕ್ ಪಾಂಡ್ಯ ಕಾಮೆಂಟ್: ಮತ್ತೆ ಒಂದಾಗುವ ಸುಳಿವು!?

Share to all

ವಿಚ್ಛೇದನನ ಬಳಿಕ ಮಾಜಿ ಪತ್ನಿ ನತಾಶ ಹಾಕಿರುವ ಪೋಸ್ಟ್ ಗೆ ಹಾರ್ದಿಕ್ ಪಾಂಡ್ಯ ಕಾಮೆಂಟ್ ಮಾಡಿದ್ದು, ಅಚ್ಚರಿ ಮೂಡಿಸಿದೆ. ಅಲ್ಲದೇ ಮತ್ತೆ ಒಂದಾಗ್ತಾರಾ ಎಂದು ಫ್ಯಾನ್ಸ್ ಕೇಳುತ್ತಿದ್ದಾರೆ.ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಬಾಲಿವುಡ್ ಬೆಡಗಿ ನತಾಶಾ ಸ್ಟಾಂಕೋವಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಚ್ಛೇದನದ ನಂತರ ಮುಂಬೈ ತೊರೆದು ತನ್ನ ಹುಟ್ಟೂರಾದ ಸರ್ಬಿಯಾಕ್ಕೆ ತೆರಳಿದ್ದ ನತಾಶಾ, ಮಗ ಅಗಸ್ತ್ಯನೊಂದಿಗೆ ಥೀಮ್ ಪಾರ್ಕ್ ಗೆ ತೆರಳಿದ್ದರು. ಸಂಬಂಧಿತ ಫೋಟೋಗಳನ್ನು ಇನ್ಸ್‌ಟಾಗ್ರಂನಲ್ಲಿ ಹಂಚಿಕೊಂಡಿದ್ದಾರೆ

ಈ ಪೋಸ್ಟ್‌ಗೆ ಹಾರ್ದಿಕ್ ಪಾಂಡ್ಯ ನೀಡಿರುವ ಪ್ರತಿಕ್ರಿಯೆ ಚರ್ಚೆಗೆ ಗ್ರಾಸವಾಗಿದೆ. ಹಾರ್ದಿಕ್ ಪಾಂಡ್ಯ ರೆಡ್ ಹಾರ್ಟ್ ಎಮೋಜಿ ಹಾಕಿ ಕಾಮೆಂಟ್ ಮಾಡಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿವೆ. ಬೇರ್ಪಟ್ಟ ನಂತರವೂ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿಯ ಬಗ್ಗೆ ಅದೇ ಗೌರವ ಮತ್ತು ಪ್ರೀತಿ ತೋರಿಸಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ

ಇನ್ನೂ ಪಾಂಡ್ಯರಿಂದ ವಿಚ್ಛೇದನ ಪಡೆದ ನಂತರ ನಟಾಶಾ ಮಗನೊಂದಿಗೆ ಸಮಯ ಕಳೆಯುತ್ತಿದ್ದಾರೆ. ನಟಾಶಾ ಪುತ್ರನೊಂದಿಗೆ ಮೃಗಾಲಯಕ್ಕೆ ಹೋಗಿದ್ದರು. ಅವುಗಳ ಫೋಟೋಗಳನ್ನು ನಟಾಶಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್​​ಗೆ ಪಾಂಡ್ಯ ಹಾರ್ಟ್​ ಸಿಂಬಲ್ ಹಾಕಿ ಕಮೆಂಟ್ ಮಾಡಿದ್ದಾರೆ. ಮಾಜಿ ಪತ್ನಿ ಹಾಕಿದ್ದ ಪೋಸ್ಟ್​ಗೆ ಪಾಂಡ್ಯ ಕಮೆಂಟ್ ಮಾಡಿರೋದನ್ನು ಅಭಿಮಾನಿಗಳು ಇಷ್ಟ ಪಟ್ಟಿದ್ದಾರೆ.


Share to all

You May Also Like

More From Author