ಬೆಂಗಳೂರು:- ಕೋರಮಂಗಲದ ಪಿಜಿಯಲ್ಲಿ ಕೊಲೆಯಾಗಿ ಹೋದ ಕೃತಿ ಕುಮಾರಿ ಮರ್ಡರ್ ಪ್ರಕರಣದಲ್ಲಿ ಬೆಚ್ಚಿ ಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ಆರೋಪಿ ಅಭಿಷೇಕ್ ಕೊಲೆ ಮಾಡಲು ಕಾರಣವೇನು ಎಂಬುವುದು ಪೊಲೀಸರ ತನಿಖೆಯಲ್ಲಿ ಬಟಾ ಬಯಲಾಗಿದೆ. ಅಭಿಷೇಕ್ ಹಾಗೂ ಕೊಲೆಯಾದ ಕೃತಿ ಕುಮಾರಿಯ ಸ್ನೇಹಿತೆ ಪರಸ್ಪರ ಪ್ರೀತಿಸುತ್ತಿದ್ದರು. ಕೃತಿ ಕುಮಾರಿ ಹಾಗೂ ಅಭಿಷೇಕ್ ಪ್ರಿಯತಮೆ ಇಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೃತಿ ಕುಮಾರಿ ಹಾಗೂ ಅಭಿಷೇಕ್ ಪ್ರಿಯತಮೆ ಜೊತೆಗೆ ಒಂದೇ ಪಿಜಿಯಲ್ಲಿ ವಾಸವಾಗಿದ್ದರು. ಈ ಪಿಜಿಗೆ ಅಭಿಷೇಕ್ ಆಗಾಗ ಬಂದು ಹೋಗುತ್ತಿದ್ದನು ಎನ್ನಲಾಗಿದೆ.
ಆರೋಪಿ ಅಭಿಷೇಕ್ ಭೋಪಾಲ್ನಲ್ಲಿ ಯಾವುದೇ ಕೆಲಸ ಕೆಲಸ ಮಾಡುತ್ತಿರಲಿಲ್ಲ. ಆಗಾಗ ಭೋಪಾಲ್ನಿಂದ ಬೆಂಗಳೂರಿಗೆ ಬಂದು ಪ್ರೇಯಸಿ ಜೊತೆ ಸುತ್ತಾಡಿಕೊಂಡು ಹೋಗುತ್ತಿದ್ದನು. ಕೆಲಸಕ್ಕೆ ಸೇರು ಅಂತ ಅಭಿಷೇಕ್ಗೆ ಪ್ರೇಯಸಿ ಹೇಳುತ್ತಿದ್ದಲು. ಬಲವಂತಕ್ಕೆ ಕೆಲಸಕ್ಕೆ ಸೇರಿದ್ದಾಗಿ ಅಭಿಷೇಕ್ ಪ್ರೇಯಸಿಗೆ ಹೇಳಿದ್ದನಂತೆ. ಆದರೆ ಇದು ಸಹ ಸುಳ್ಳು ಎಂದು ಅಭಿಷೇಕ್ನ ಪ್ರೇಯಸಿಗೆ ಗೊತ್ತಾಗಿತ್ತು. ಹೀಗಾಗಿ ಅಭಿಷೇಕ್ನನ್ನು ಅವೈಡ್ ಮಾಡಲು ಆರಂಭಿಸಿದ್ದಳು. ಇದರಿಂದ ಕೋಪಗೊಂಡ ಅಭಿಷೇಕ್ ಆಗಾಗ ಬಂದು ಪಿಜಿ ಬಳಿ ಗಲಾಟೆ ಮಾಡುತ್ತಿದ್ದನು.
ಕೊಲೆ ಮಾಡುವುದಕ್ಕಿಂತ ಮೂರು ದಿನದ ಮುಂಚೆ ಬೆಂಗಳೂರಿನಲ್ಲಿ ಅಭಿಷೇಕ್ ಬಾಡಿಗೆ ಮನೆ ಮಾಡಿದ್ದನು. ಈ ಬಾಡಿಗೆ ಮನೆಯಲ್ಲಿ ಪ್ರೇಯಸಿಯನ್ನು ಇರಿಸಿದ್ದನು. ಆದರೆ ಇದು ಆಕೆಗೆ ಇಷ್ಟವಿರಲಿಲ್ಲ. ಆದರೆ ಈ ಮನೆಯಲ್ಲಿ ಇರಲು ಆಗದೆ ಅಭಿಷೇಕ್ ಪ್ರಯೇಸಿಗೆ ಇರಲು ಆಗದೆ ಒದ್ದಾಡಿದ್ದಳು. ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುವೆ ಗೆಳತಿ ಕೃತಿ ಕುಮಾರಿಗೆ ಅಭಿಷೇಕ್ ಪ್ರೇಯಸಿಗೆ ಹೇಳಿದ್ದಾಳೆ.
ಬಳಿಕ ಕೃತಿ ಕುಮಾರಿ ತನ್ನ ಸ್ನೇಹಿತರೊಂದಿಗೆ ತೆರಳಿ ಗೆಳತಿಯನ್ನು ತನ್ನ ಪಿಜಿಗೆ ಕರೆತಂದಿದ್ದಳು. ಈ ವಿಚಾರ ಗೊತ್ತಾಗುತ್ತಿದ್ದಂತೆ ಕೋಪಗೊಂಡ ಅಭಿಷೇಕ್, ಮಂಗಳವಾರ ರಾತ್ರಿ 11.30ರ ಸುಮಾರಿಗೆ ಏಕಾ ಏಕಿ ಪಿಜಿಗೆ ಹೋಗಿದ್ದಾನೆ. ಒಳ ಹೋಗಿ ಕೃತಿ ಕುಮಾರಿ ಇದ್ದ ರೂಂ ಬಾಗಿಲು ಬಡೆದಿದ್ದಾನೆ. ಕೃತಿ ಕುಮಾರಿ ಬಾಗಿಲು ತೆಗೆಯುತ್ತಿದ್ದಂತೆ, ಚಾಕು ಇರಿದು ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಅಭಿಷೇಕ್ ಹೊರ ರಾಜ್ಯಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ ಪೊಲೀಸರಿಂದ ತನಿಖೆ ಮುಂದುವರಿದಿದೆ.