ಬೆಂಗಳೂರು:- ಬೆಂಗಳೂರಿನ ಕೋರಮಂಗಲದ ಪಿಜಿಯಲ್ಲಿ ಯುವತಿಯ ಬರ್ಭರ ಹತ್ಯೆ ನಡೆದಿತ್ತು. ಇದೀಗ ಹತ್ಯೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಲೈವ್ ಮಡ್೯ರ್ ವಿಡಿಯೋ ವೈರಲ್ ಆಗಿದೆ.
ಆರೋಪಿ ಅಭಿಷೇಕ ಕೊಲೆ ಮಾಡುವ ಸಿಸಿಟಿವಿ ದೃಶ್ಯ ಸೆರೆಯಾಗಿದೆ.ಜುಲೈ 23 ರಂದು ಅಭಿಷೇಕ ರಾತ್ರಿ 11-13 ಕ್ಕೆ ಪಿಜಿಗೆ ಎಂಟ್ರಿ ಕೊಟ್ಟಿದ್ದಾನೆ.ಬಳಿಕ ಕೃತಿ ಕುಮಾರಿ ಇದ್ದ ರೂಮ್ ಬಾಗಿಲು ಬಡಿದಿದ್ದಾನೆ.ಈ ವೇಳೆ ಕೃತಿ ಡೋರ್ ಓಪನ್ ಮಾಡುತ್ತಿದ್ದಂತೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.ಕೃತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದೇ ಹಲವು ಬಾರಿ ಇರಿದು ಕೊಲೆ ಮಾಡಿದ್ದಾನೆ.