ತಾಯಿಯಿಂದಲೇ ಮಗುವಿನ ಕಿಡ್ನ್ಯಾಪ್ ಆರೋಪ..! ಮಗುವನ್ನು ಕಿಡ್ನ್ಯಾಪ್ ಮಾಡೋ ದೃಶ್ಯ ಸಿಸಿಟಿವಿಯಲ್ಲಿ ಸೆರೆ..ಮಗುವಿನ ತಾಯಿ ಮತ್ತು ತಾಯಿಯ ಸ್ನೇಹಿತ ನಿಂದ ಕೃತ್ಯ..
ಬೆಂಗಳೂರು:-ಪತಿ ಮತ್ತು ಪತ್ನಿಯ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಗುವೊಂದು ಕಿಡ್ನ್ಯಾಪ್ ಮಾಡಿದ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.
ಪತಿ ಸಿದ್ದಾರ್ಥ ಮತ್ತು ಪತ್ನಿ ಅನುಪಮ ನಡುವೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದೂರಾಗಿದ್ರು.
ಪತ್ನಿ ಅನುಪಮ ಬೇರೊಂದು ವ್ಯಕ್ತಿ ಯನ್ನು ಮದುವೆ ಆಗಿದ್ರು.ಈ ಹಿನ್ನೆಲೆಯಲ್ಲಿ ಕೋರ್ಟ್ ಮಗುವನ್ನು ಪತಿ ಸಿದ್ದಾರ್ಥ ವಶಕ್ಕೆ ಒಪ್ಪಿಸಿತ್ತು.
ಅಪಾರ್ಟ್ ಮೆಂಟ್ ಮುಂಭಾಗ ಸ್ಕೂಲ್ ಗೆ ಹೋಗಲು ತಂದೆಯ ಜೊತೆಗೆ ನಿಂತಾಗ ಏಕಾ ಏಕಿ ಬಂದ ತಾಯಿ ಅನುಪಮಾ ಮತ್ತು ಅವಳ ಗೆಳೆಯ ಸೇರಿ ಮಗುವನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ…
ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಿದ್ದಾರೆ.