ವಿಜಯನಗರ ಪೊಲೀಸರಿಂದ ಪತ್ರಕರ್ತರ ಮೇಲೆ ದೌರ್ಜನ್ಯ ! ರಾಜ್ಯ ಮಾನವ ಹಕ್ಕು ಆಯೋಗದ ಎಡಿಜಿಪಿಯಿಂದ ವರದಿ ..ಫೊರೆನ್ಸಿಕ್ ವರದಿ ಬರೋ ಮೊದಲೇ ರಿಸಲ್ಟ್ ಹೇಳಿದ್ದ ಇನ್ಸ್ ಪೆಕ್ಟರ್.

Share to all

ವಿಜಯನಗರ ಪೊಲೀಸರಿಂದ ಪತ್ರಕರ್ತರ ಮೇಲೆ ದೌರ್ಜನ್ಯ ! ರಾಜ್ಯ ಮಾನವ ಹಕ್ಕು ಆಯೋಗದ ಎಡಿಜಿಪಿಯಿಂದ ವರದಿ ..ಫೊರೆನ್ಸಿಕ್ ವರದಿ ಬರೋ ಮೊದಲೇ ರಿಸಲ್ಟ್ ಹೇಳಿದ್ದ ಇನ್ಸ್ ಪೆಕ್ಟರ್.

 

.ಚಾರ್ಜ್ ಶೀಟ್ ನಲ್ಲಿ ನಕಲಿ ಅಂಚೆ ಸ್ವೀಕೃತಿ ಪ್ರತಿ.
ಠಾಣೆಯ ಸ್ಟೇಷನ್ ಹೌಸ್ ಡೈರಿಯನ್ನೇ ತಿರುಚಿದ ಇನ್ಸ್ ಪೆಕ್ಟರ್ ಪತ್ರಕರ್ತರ ದೂರಿನ ದಾಖಲೆಯನ್ನೇ ನಾಶ ಪಡಿಸಿದ ಕೃತ್ಯ ಸಾಭೀತು. ಮನೆ- ಕಚೇರಿಯಲ್ಲೇ ಇದ್ದರೂ ‘ಪರಾರಿ ಚಾರ್ಜ್ ಶೀಟ್’ ಹಾಕಿ ಜಾಮೀನು ಸಿಗದಂತೆ ಮಾಡಿದ ಇನ್ಸ್ ಪೆಕ್ಟರ್ !

ವಿಜಯನಗರ:-ಭಾರತದಲ್ಲಿ ಪತ್ರಕರ್ತರ ಮೇಲೆ ನಡೆಯುವ ಹಿಂಸಾಚಾರವು ಹೆಚ್ಚಾಗುತ್ತಿದೆ. ಇತ್ತಿಚೆಗೆ ಬಿಡುಗಡೆಯಾದ ‘ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕ’ದಲ್ಲಿ 180 ದೇಶಗಳ ಪೈಕಿ ಭಾರತ 159ನೇ ಸ್ಥಾನದಲ್ಲಿದೆ. ಈ ಕುಸಿತಕ್ಕೆ ಕರ್ನಾಟಕ ಪೊಲೀಸರ ಕೊಡುಗೆಯೂ ಅಪಾರ !

ಪತ್ರಕರ್ತರನ್ನು ನೇರವಾಗಿ ಎದುರಿಸಲಾಗದ ಪೊಲೀಸರು ಕೆಲ ವ್ಯಕ್ತಿಗಳ ಜೊತೆ ಸೇರಿಕೊಂಡು ಪತ್ರಕರ್ತರನ್ನು ಹೇಗೆ ಪ್ರಕರಣಗಳಲ್ಲಿ ಸಿಲುಕಿಸುತ್ತಾರೆ ಎನ್ನುವುದಕ್ಕೆ ಹಿರಿಯ ಪತ್ರಕರ್ತ ಜಿ ಎಂ ಕುಮಾರ್ ರವರ ಮೇಲೆ ಹೂಡಲಾದ ಸುಳ್ಳು ಮೊಕದ್ದಮೆಯೇ ಸಾಕ್ಷಿ !

ವಿಜಯನಗರ ಪೊಲೀಸ್ ಠಾಣೆಯಲ್ಲಿ ಪತ್ರಕರ್ತ ಜಿ ಎಂ ಕುಮಾರ್ ವಿರುದ್ದ ಕಾನೂನು ಬಾಹಿರವಾಗಿ ಕ್ರೈಂ ನಂ 92/2022 ಎಂಬ ಪ್ರಕರಣವನ್ನು ದಾಖಲಿಸಿ ಕಾನೂನು ಉಲ್ಲಂಘಿಸಿ, ನಕಲಿ ದಾಖಲೆ ಸಿದ್ದಪಡಿಸಿ ಪತ್ರಕರ್ತರ ಮೂಲಭೂತ ಹಕ್ಕಾಗಿರುವ ಜಾಮೀನು ನಿರಾಕರಿಸಲು ನಡೆದ ಪಿತೂರಿಯ ಬಗ್ಗೆ ಮಾನವ ಹಕ್ಕು ಆಯೋಗದ ಎಡಿಜಿಪಿಯವರು ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ.

ಜಿ ಎಂ ಕುಮಾರ್ ಅವರು ಬಿಟಿವಿ ಕನ್ನಡ ಸುದ್ದಿ ವಾಹಿನಿಯ ಎಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಕಳೆದ 25 ವರ್ಷಗಳ ಪತ್ರಕೋಧ್ಯಮ ಅನುಭವ ಹೊಂದಿದ್ದಾರೆ. ಪ್ರತಿಷ್ಠಿತ ರಾಮನಾಥ ಗೋಯಂಕಾ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕೃತರಾಗಿರುವ ಜಿ ಎಂ ಕುಮಾರ್ ಅವರನ್ನು ಪ್ರಕರಣವೊಂದರಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಡಿ ಸಂತೋಷ್ ಕುಮಾರ್ ರನ್ನು ಬಳಸಿಕೊಂಡು ಸಿಲುಕಿಸಲಾಗಿತ್ತು.

ಪತ್ರಕರ್ತ ಜಿ ಎಂ ಕುಮಾರ್ ರವರ ವಿರುದ್ದ ನಡೆದ ಪಿತೂರಿಯ ಬಗ್ಗೆ ಮಾನವ ಹಕ್ಕು ಆಯೋಗದ ಎಡಿಜಿಪಿ ಈ ಕೆಳಗಂಡ ಅಂಶಗಳನ್ನು ಗುರುತಿಸಿ ವರದಿ ನೀಡಿದ್ದಾರೆ.

“ಅಶ್ವಿನ್ ಮಹೇಂದ್ರ/ ಮಹೆಂದ್ರ ಮತ್ತು ಐದು ಜನರ ವಿರುದ್ದ ಪತ್ರಕರ್ತ ಜಿ ಎಂ ಕುಮಾರ್ ನೀಡಿದ ದೂರನ್ನು ವಿಜಯನಗರ ಪೊಲೀಸರು ಎಫ್ಐಆರ್ ಮಾಡಿಲ್ಲ. ಕಾನೂನು ಸಲಹೆ ಪಡೆಯುವುದಾಗಿ ಹಿಂಬರಹ ನೀಡಲಾಗಿದ್ದು, ಕಾನೂನು ಸಲಹೆಯನ್ನೇ ಪಡೆದಿಲ್ಲ. ಜಿ ಎಂ ಕುಮಾರ್ ಅವರು ದೂರಿನ ಜೊತೆ ನೀಡಿದ್ದ ದಾಖಲೆಯನ್ನು ವಿಜಯನಗರ ಇನ್ಸ್ ಪೆಕ್ಟರ್ ಡಿ ಸಂತೋಷ್ ಕುಮಾರ್ ಉದ್ದೇಶಪೂರ್ವಕವಾಗಿ ಕಳೆದುಹಾಕಿದ್ದಾರೆ” ಎಂದು ಆಯೋಗದ ಎಡಿಜಿಪಿ ವರದಿ ಹೇಳುತ್ತದೆ.

“ವಿಜಯನಗರ ಪೊಲೀಸರು ಪತ್ರಕರ್ತ ಜಿ ಎಂ ಕುಮಾರ್ ವಿರುದ್ದ 92/2022 ಪ್ರಕರಣದಲ್ಲಿ ABSCONDING CHARG SHEET ದಾಖಲಿಸುತ್ತಾರೆ. ಇದರಿಂದಾಗಿ ಜಿ ಎಂ ಕುಮಾರ್ ಅವರಿಗೆ ಜಾಮೀನು ಸಿಗುವುದಿಲ್ಲ. ವಾಸ್ತವವಾಗಿ ಪತ್ರಕರ್ತ ಜಿ ಎಂ ಕುಮಾರ್ ಅವರು ತನ್ನ ವಿರುದ್ದ ಎಫ್ಐಆರ್ ದಾಖಲಾದ ನಂತರ ಬೆಂಗಳೂರು ನಗರವನ್ನೇ ತೊರೆದಿಲ್ಲ. ಮನೆ ಮತ್ತು ಕಚೇರಿ ಹೊರತುಪಡಿಸಿ ಇನ್ಯಾವ ಕಡೆಯೂ ಪ್ರವಾಸ ಮಾಡಿಲ್ಲ. ಜಿ ಎಂ ಕುಮಾರ್ ಅವರು ಮೊಬೈಲ್ ಕೂಡಾ ಸ್ವಿಚ್ಡ್ ಆಫ್ ಮಾಡಿಲ್ಲವಾಗಿದ್ದು ABSCONDING ಎಂಬುದು ಸುಳ್ಳಾಗಿರುತ್ತದೆ” ಎಂದು ಎಡಿಜಿಪಿ ವರದಿ ನೀಡಿದ್ದು, ವರದಿಗೆ ಪೂರಕವಾಗಿ ಪತ್ರಕರ್ತ ಜಿ ಎಂ ಕುಮಾರ್ ಅವರ ಮೊಬೈಲ್ ಸಿಡಿಆರ್, ಟವರ್ ಲೊಕೇಶನ್ ಗಳನ್ನು ಪಡೆದು ತನಿಖೆ ನಡೆಸಿ ವರದಿಯಲ್ಲಿ ಲಗತ್ತಿಸಿದ್ದಾರೆ.

“ಪತ್ರಕರ್ತ ಜಿ ಎಂ ಕುಮಾರ್ ಅವರಿಗೆ ಜಾಮೀನು ನಿರಾಕರಿಸಬೇಕು ಎಂಬ ಉದ್ದೇಶದಿಂದ ‘ನಕಲಿ ಪೊಲೀಸ್ ಠಾಣಾ ಡೈರಿ’ ಯನ್ನು ಸಿದ್ದಪಡಿಸಲಾಗುತ್ತದೆ. ಜಿ ಎಂ ಕುಮಾರ್ ಅವರ ಸಹೋದ್ಯೋಗಿ ಪತ್ರಕರ್ತ ರವಿನಾರಾಯಣ್ ಎಂಬವರು ಪೊಲೀಸರಿಗೆ ಬೆದರಿಕೆ ಒಡ್ಡಿದ್ದರು ಎಂದು ಸ್ಟೇಷನ್ ಹೌಸ್ ಡೈರಿಯಲ್ಲಿ ಬರೆಯಲಾಗುತ್ತದೆ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಈ ಬಗ್ಗೆ ಡಿಸಿಪಿ ಮತ್ತು ಎಸಿಪಿಯವರು ತನಿಖೆ ನಡೆಸಿ ಹೈಕೋರ್ಟ್ ಗೆ ವರದಿ ನೀಡಿದ್ದಾರೆ. ಸದ್ರಿ ವರದಿಯಲ್ಲಿ ಸಿಸಿಟಿವಿ ಮತ್ತು ಠಾಣಾ ಸಿಬ್ಬಂದಿಗಳ ಹೇಳಿಕೆಗಳಿವೆ. ಅದರ ಪ್ರಕಾರ ಸ್ಟೇಷನ್ ಹೌಸ್ ಡೈರಿಯೇ ನಕಲಿಯಾಗಿದ್ದು ಇನ್ಸ್ ಸ್ಪೆಕ್ಟರ್ ಸಂತೋಷ್ ಕುಮಾರ್ ನಕಲಿ ಸ್ಟೇಷನ್ ಹೌಸ್ ಡೈರಿ ರಚಿಸಿದ್ದಾರೆ” ಎಂದು ಮಾನವ ಹಕ್ಕು ಆಯೋಗ ಆತಂಕ ವ್ಯಕ್ತಪಡಿಸಿದೆ.

“ಪತ್ರಕರ್ತ ಜಿ ಎಂ ಕುಮಾರ್ ರನ್ನು ಪ್ರಕರಣದಲ್ಲಿ ಸಿಲುಕಿಸಲು ಜಿ ಎಂ ಕುಮಾರ್ ರವರ ಸಹಿಯುಳ್ಳ ಪ್ರತಿಯನ್ನು ಫೋರೆನ್ಸಿಕ್ ಗೆ ಕಳುಹಿಸಿ ಸಾಭೀತು ಮಾಡಲಾಗಿದೆ. 28.12.2022 ರಂದು ಫೋರೆನ್ಸಿಕ್ ವರದಿ ಬಂದಿದೆ. ಆದರೆ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್ ಅವರು ಎಸಿಪಿಗೆ ನೀಡಿದ ಹೇಳಿಕೆಯಲ್ಲಿ “ರವಿನಾರಾಯಣ್ ಅವರು ದಿನಾಂಕ 07.12.2022 ರಂದು ಭೇಟಿಯಾಗಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಬಿಟಿವಿ ಮುಖ್ಯಸ್ಥರಾದ ಜಿ ಎಂ ಕುಮಾರ್ ವಿರುದ್ದ ದಾಖಲಾದ ಮೊ ಸಂ 92/22 ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸುವಂತೆ ಕೇಳಿಕೊಂಡರು. ಆಗ ನಾನು ಎಫ್ಎಸ್ ಎಲ್ ವರದಿಯಲ್ಲಿ ಜಿ ಎಂ ಕುಮಾರ್ ಅಪರಾಧ ಎಸಗಿರುವುದು ಸಾಭೀತಾಗಿದೆ ಎಂದು ಹೇಳಿದೆನು” ಎಂದು ಹೇಳಿಕೆ ಕೊಟ್ಟಿದ್ದಾರೆ. ಫೋರೆನ್ಸಿಕ್ ವರದಿ ಬರುವ ಮೊದಲೇ ಇನ್ಸ್ ಪೆಕ್ಟರ್ ಗೆ ಫಲಿತಾಂಶ ಗೊತ್ತಿತ್ತು. ಈ ಕೃತ್ಯವನ್ನು ಅವರು ಆಯೋಗದ ಮುಂದೆ ಒಪ್ಪಿಕೊಂಡಿದ್ದಾರೆ” ಎಂದು ಎಡಿಜಿಪಿ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

“ಜಿ ಎಂ ಕುಮಾರ್ ರವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಗ್ಗೆ ಪೊಲೀಸರು ನೀಡಿರುವ ದಾಖಲೆಯಲ್ಲಿ ಆರು ಪೊಲೀಸ್ ಸಿಬ್ಬಂಧಿಗಳ ಹೆಸರು ಮತ್ತು ಪಿಸಿ ಸಂಖ್ಯೆಯನ್ನು ನಮೂದಿಸಲಾಗಿದೆ. ಅವರಿಗೆ ನೋಟಿಸ್ ನೀಡಿ ಆಯೋಗ ವಿಚಾರಣೆ ನಡೆಸಿದಾಗ ಇಬ್ಬರು ಪೊಲೀಸ್ ಸಿಬ್ಬಂಧಿಗಳು ತಾವು ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿಲ್ಲ ಎಂದು ಹೇಳಿದ್ದಾರೆ” ಎಂಬ ಆತಂಕಕಾರಿ ಘಟನೆಯೂ ವರದಿಯಲ್ಲಿ ಬಹಿರಂಗಗೊಂಡಿದೆ.

ವಿಪರ್ಯಾಸ ಎಂದರೆ “ಜಿ ಎಂ ಕುಮಾರ್ ಅವರ ಪ್ರಕರಣ ತನಿಖೆ ಸಂಬಂಧ ನೋಟಿಸ್ ಅನ್ನು ಜಿ ಎಂ ಕುಮಾರ್ ಅವರ ಮನೆಗೆ ಅಂಚೆ ಮೂಲಕ ಕಳುಹಿಸಲಾಗಿದೆ ಎಂದು ಅಂಚೆ ದಾಖಲೆಗಳನ್ನು ಪೊಲೀಸ್ ಇನ್ಸ್ ಪೆಕ್ಟರ್ ಡಿ ಸಂತೋಷ್ ಕುಮಾರ್ ಲಗತ್ತಿಸಿದ್ದಾರೆ. ಅಂಚೆ ಇಲಾಖೆಗೆ ಮಾನವ ಹಕ್ಕು ಆಯೋಗ ನೋಟಿಸ್ ನೀಡಿ ದಾಖಲೆ ಪರಿಶೀಲಿಸಿದಾಗ ಪೊಲೀಸ್ ಇನ್ಸ್ ಪೆಕ್ಟರ್ ಡಿ ಸಂತೋಷ್ ಕುಮಾರ್ ಲಗತ್ತಿಸಿದ ಅಂಚೆ ದಾಖಲೆಯು ರಾಜಾಜಿನಗರ ಪೊಲೀಸ್ ಠಾಣೆಗೆ ಕಳುಹಿಸಿದ ದಾಖಲೆಯಾಗಿತ್ತೇ ವಿನಹ ಜಿ ಎಂ ಕುಮಾರ್ ರವರ ನಿವಾಸಕ್ಕೆ ಕಳುಹಿಸಿದ್ದಾಗಿರಲಿಲ್ಲ” ಎಂಬುದು ಎಡಿಜಿಪಿ ವರದಿಯಲ್ಲಿ ಬಹಿರಂಗಗೊಂಡಿದೆ.

ಹೀಗೆ ಸ್ಟೇಷನ್ ಹೌಸ್ ಡೈರಿ, ಅಂಚೆ ದಾಖಲೆಗಳು, ಬ್ಯಾಂಕ್ ದಾಖಲೆಗಳು, ಫೊರೆನ್ಸಿಕ್ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ಪತ್ರಕರ್ತ ಜಿ ಎಂ ಕುಮಾರ್ ರವರ ಮೇಲೆ ನಕಲಿ ಕೇಸ್ ದಾಖಲಿಸಿ, ಜಾಮೀನು ನಿರಾಕರಿಸಿ, ಅರೆಸ್ಟ್ ಮಾಡುವಂತೆ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಸಂತೋಷ್ ಕುಮಾರ್, ಹೇಮಂತ್ ಕುಮಾರ್ ಪಿತೂರಿ ನಡೆಸಿರುವುದು ಮಾನವ ಹಕ್ಕು ಆಯೋಗದ ಎಡಿಜಿಪಿ ವರದಿಯಲ್ಲಿ ಕಂಡು ಬಂದಿದೆ.

ಉದಯ ವಾರ್ತೆ
ವಿಜಯನಗರ.


Share to all

You May Also Like

More From Author