ಛೇ ಇವನೆಂಥಾ ನೀಚ: ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಕಾಮುಕ!

Share to all

ಆಂಧ್ರ ಪ್ರದೇಶ:- 50 ವರ್ಷದ ಕಾಮುಕನೊಬ್ಬ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಜರುಗಿದೆ.43 ವರ್ಷದ ಮಹಿಳೆ ಮೇಲೆ 50 ವರ್ಷದ ಆರೋಪಿ ರೇಪ್ ಮಾಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿ ಮನೆಗೆ ನುಗ್ಗಿದ್ದ ಆರೋಪಿ ಏನೂ ಅರಿಯದ ಮಹಿಳೆಗೆ ಹಿಂಸೆ ಕೊಟ್ಟಿದ್ದಲ್ಲೆ ಅತ್ಯಾಚಾರವೆಸಗಿದ್ದಾನೆ. ನಂತರ ಮಹಿಳೆಯ ಕುಟುಂಬದವರು ಮನೆಗೆ ಹಿಂದಿರುಗಿದಾಗ ಆಕೆಗೆ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದರು.

ಮಹಿಳೆ ತನಗೆ ತಿಳಿದ ಎಲ್ಲಾ ವಿಚಾರವನ್ನು ಕುಟುಂಬದವರ ಬಳಿ ಹೇಳಿಕೊಂಡಿದ್ದಾರೆ. ನಂತರ, ಪೊಲೀಸ್ ದೂರು ದಾಖಲಿಸಲಾಗಿದೆ, ಮತ್ತು ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಏನೇ ಆಗಲಿ ಒಬ್ಬ ಬುದ್ಧಿಮಾಂದ್ಯ ಮಹಿಳೆ ಮೇಲೆ ಈ ನೀಚ ಮಾಡಿದ್ದು ಮಾತ್ರ ಹೇಯ ಕೃತ್ಯ.


Share to all

You May Also Like

More From Author