ವಿದೇಶಿ ಆಟಗಾರರು ಬ್ಯಾನ್ ಆಗ್ತಾರಾ!?: IPL ಫ್ರಾಂಚೈಸಿಗಳ ನಿರ್ಧಾರ ಏನು!?

Share to all

2025ರ ಆವೃತ್ತಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಸಜ್ಜಾಗುತ್ತಿದ್ದಂತೆಯೇ, ಬಿಸಿಸಿಐ ಮತ್ತು ಐಪಿಎಲ್ ಫ್ರಾಂಚೈಸಿಗಳು ಪ್ರತಿತಂತ್ರ ಮತ್ತು ಲೀಗ್‌ನ ಹೊಸ ಸ್ವರೂಪಕ್ಕೆ ಬದಲಾವಣೆಯಾಗಲು ಸಿದ್ಧತೆ ನಡೆಸಿವೆ. ಇತ್ತೀಚಿಗೆ ಮುಂಬೈನಲ್ಲಿ ನಡೆದ ಬಿಸಿಸಿಐ ಮತ್ತು ಪ್ರಾಂಚೈಸಿಗಳ ನಡುವಿನ ಸಭೆಯಲ್ಲಿ, ಆಟಗಾರರ ಉಳಿಸಿಕೊಳ್ಳುವಿಕೆಯಿಂದ ಹಿಡಿದು ಮೆಗಾ ಹರಾಜಿನ ನಿಯಮಗಳವರೆಗೆ ಚರ್ಚೆಯಾಗಿದೆ.

ಅದರಂತೆ ಐಪಿಎಲ್​ ಹರಾಜಿನಲ್ಲಿ ಕಾಣಿಸಿಕೊಂಡು ಆ ಬಳಿಕ ಹಿಂದೆ ಸರಿಯುವ ವಿದೇಶಿ ಆಟಗಾರರ ಮೇಲೆ ಎರಡು ವರ್ಷಗಳ ನಿಷೇಧ ಹೇರಬೇಕೆಂದು ಕೆಲ ಫ್ರಾಂಚೈಸಿಗಳು ಪ್ರಸ್ತಾಪಿಸಿವೆ. ಇದಕ್ಕೆ ಮುಖ್ಯ ಕಾರಣ, ಕೆಲ ಆಟಗಾರರು ಆಯ್ಕೆಯಾದರೂ ಐಪಿಎಲ್ ಆರಂಭದ ವೇಳೆ ಹಿಂದೆ ಸರಿಯುತ್ತಿರುವುದು. ವಿದೇಶಿ ಆಟಗಾರರ ಇಂತಹ ನಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಇದೀಗ ಐಪಿಎಲ್ ಫ್ರಾಂಚೈಸಿಗಳು ಆಗ್ರಹಿಸಿದೆ

ಅದರಂತೆ ಇದೀಗ ಗಾಯದ ಹೊರತಾಗಿ ಯಾವುದೇ ವಿದೇಶಿ ಆಟಗಾರ ಐಪಿಎಲ್​ನಿಂದ ಹಿಂದೆ ಸರಿದರೆ, ಅಂತಹ ಆಟಗಾರರನ್ನು 2 ವರ್ಷಗಳವರೆಗೆ ಬ್ಯಾನ್ ಮಾಡುವಂತೆ ತಿಳಿಸಲಾಗಿದೆ. ಈ ನಿಯಮವು ಈ ಬಾರಿಯ ಮೆಗಾ ಹರಾಜಿನ ವೇಳೆ ಜಾರಿಯಾಗುವ ಸಾಧ್ಯತೆಯಿದೆ.

ಐಪಿಎಲ್ 2022, 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಜೇಸನ್ ರಾಯ್ ಟೂರ್ನಿ ಆರಂಭಕ್ಕೂ ಕೆಲ ದಿನಗಳಿರುವಾಗ ಹಿಂದೆ ಸರಿದ್ದರು. ಹಾಗೆಯೇ ವನಿಂದು ಹಸರಂಗ (SRH), ಹ್ಯಾರಿ ಬ್ರೂಕ್ (DC), ಡೇವಿಡ್ ವಿಲ್ಲಿ (ಎಲ್​ಎಸ್​ಜಿ), ಗಸ್ ಅಟ್ಕಿಸನ್ (KKR), ಮಾರ್ಕ್​ ವುಡ್ (LSG) ಸೇರಿದಂತೆ ಕೆಲ ಆಟಗಾರರು ಕಳೆದ ಸೀಸನ್​ನಲ್ಲಿ ಕೈಕೊಟ್ಟಿದ್ದರು.

ನಾವು ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತೇವೆ. ಹೀಗೆ ಯೋಜನೆಯೊಂದಿಗೆ ಖರೀದಿಸಿದ ಆಟಗಾರರು ಕೊನೆಯ ಕ್ಷಣದಲ್ಲಿ ಕೈ ಕೊಡುವುದರಿಂದ ಅದು ತಂಡದ ಸಮತೋಲನ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಹೀಗಾಗಿ ಐಪಿಎಲ್​ಗೆ ಆಯ್ಕೆಯಾಗಿ ವಿನಾಕಾರಣ ಹಿಂದೆ ಸರಿಯುವ ಆಟಗಾರರ ಮೇಲೆ ಕೆಲ ವರ್ಷಗಳವರೆಗೆ ನಿಷೇಧ ಹೇರಬೇಕೆಂದು ಫ್ರಾಂಚೈಸಿಗಳು ಆಗ್ರಹಿಸಿದೆ ಐಪಿಎಲ್ ಫ್ರಾಂಚೈಸಿಗಳ ಈ ಮನವಿಗೆ ಬಿಸಿಸಿಐ ಕಡೆಯಿಂದಲೂ ಸಕರಾತ್ಮಕ ಸ್ಪಂದನೆ ದೊರೆತಿದೆ.


Share to all

You May Also Like

More From Author