ಸರ್ವ ರೋಗಕ್ಕೂ ಮದ್ದಾಗಬಲ್ಲದು ಸಾಂಬಾರ್ ಪದಾರ್ಥದ ಅರಿಶಿನ..!

Share to all

ಪ್ರಾಚೀನ ಕಾಲದಿಂದಲೂ ಸಾಂಪ್ರದಾಯಿಕ ಔಷಧವಾಗಿ ಬಳಸಲಾಗುವ ಅರಿಶಿನ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಎಲ್ಲರ ಮನೆಗಳಲ್ಲೂ ಸಾಮಾನ್ಯವಾಗಿ ಇದ್ದೇ ಇರುವ ಈ ಅರಿಶಿಣ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ. ಅಷ್ಟೇ ಅಲ್ಲದೆ ಇಂದು, ಅರಿಶಿನವನ್ನು ಎದೆಯುರಿ, ಉರಿಯೂತ ಮತ್ತು ಹೊಟ್ಟೆಯ ಹುಣ್ಣುಗಳಿಗೆ ಪರ್ಯಾಯ ಚಿಕಿತ್ಸೆಯಾಗಿ ಗುರುತಿಸಲಾಗಿದೆ.

  • ಅರಿಶಿನವನ್ನು ನಮ್ಮ ದೈನಂದಿನ ಅಡುಗೆಯಲ್ಲೂ ಸಹ ಬಳಸಲಾಗುತ್ತದೆ, ಇದು ಆಹಾರಕ್ಕೆ ಬಣ್ಣ ಕೊಡುವುದರಿಂದ ಹಿಡಿದು ಆರೋಗ್ಯ ಪ್ರಯೋಜನಗಳವರೆಗೆ ಎಲ್ಲವನ್ನೂ ನೀಡುತ್ತದೆ
  • ಅರಿಶಿನದಲ್ಲಿರುವ ಅತ್ಯಂತ ಸಕ್ರಿಯ ಪದಾರ್ಥವನ್ನು ಕರ್ಕ್ಯುಮಿನ್ ಎಂದು ಕರೆಯಲಾಗುತ್ತದೆ. ಅರಿಶಿನದ ಹೆಚ್ಚಿನ ಆರೋಗ್ಯ ಪ್ರಯೋಜನಗಳಿಗೆ ಇದು ಕಾರಣವಾಗಿದೆ ಎಂದು ಹೇಳಲಾಗುತ್ತದೆ.
  • ಕರ್ಕ್ಯುಮಿನ್ ಪಾಲಿಫಿನಾಲ್ ಉತ್ಕರ್ಷಣ ನಿರೋಧಕವಾಗಿದ್ದು, ಇದು ಪ್ರಬಲವಾದ ಆಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಕ್ಯಾನ್ಸರ್ ವಿರೋಧಿ ಸಾಮರ್ಥ್ಯಗಳನ್ನು ಹೊಂದಿದೆ ಎಂದು ತುಂಬಾ ಸಂಶೋಧನೆಗಳು ತೋರಿಸಿವೆ.
  • ಅರಿಶಿನವು, ಅಧಿಕ ಹೊಟ್ಟೆಯ ಆಮ್ಲವನ್ನು ನಿಗ್ರಹಿಸಲು, ಅಜೀರ್ಣಕ್ಕೆ ಚಿಕಿತ್ಸೆ ನೀಡಲು ಉತ್ತಮವಾಗಿದೆ ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯದಲ್ಲಿ ಉಲ್ಲೇಖಿಸಲಾಗಿದೆ
  • ಅರಿಶಿನವು ಕರ್ಕ್ಯುಮಿನ್ ಎಂಬ ಸ್ವಾಭಾವಿಕವಾಗಿ ಸಕ್ರಿಯವಾಗಿರುವ ಸಂಯುಕ್ತವನ್ನು ಹೊಂದಿದ್ದು, ಇದು ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ ಎಂದು ಹೇಳಲಾಗಿದೆ.
  • ಇದನ್ನು ಅಜೀರ್ಣವನ್ನು ಒಳಗೊಂಡಂತೆ ದೀರ್ಘಕಾಲದವರೆಗೆ ಔಷಧೀಯ ಪರಿಹಾರವಾಗಿ ಬಳಸಲಾಗುತ್ತದೆಯಾದರೂ ಸಾಂಪ್ರದಾಯಿಕ ಔಷಧಿಗಳೊಂದಿಗೆ ಹೋಲಿಸಿದರೆ ಇದು ನಿಜಕ್ಕೂ ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ ಎಂಬುದಾಗಿಯೂ ಅಧ್ಯಯನ ತಂಡ ಹೇಳಿಕೊಂಡಿದೆ.
  • ನಿಯಂತ್ರಿತ ಪ್ರಯೋಗವು 28 ದಿನಗಳ ಅವಧಿಗೆ ಮೂರು ಚಿಕಿತ್ಸಾ ಗುಂಪುಗಳ ಮೇಲೆ ನಡೆಸಲಾಗಿದೆ. ಥೈಲ್ಯಾಂಡ್‌ನ ಆಸ್ಪತ್ರೆಯಲ್ಲಿ ಅಜ್ಞಾತ ಕಾರಣದಿಂದ ಹೊಟ್ಟೆ ಸಂಬಂಧಿತ ಅಸ್ವಸ್ಥತೆಗಳನ್ನು ಒಳಗೊಂಡ 18-70 ವರ್ಷ ವಯಸ್ಸಿನ 206 ರೋಗಿಗಳನ್ನು ಈ ಅಧ್ಯಯನ ಒಳಗೊಂಡಿತ್ತು.
  • ಈ ಪ್ರಯೋಗದಲ್ಲಿ ಅರಿಶಿನ ಮತ್ತು ಒಂದು ಸಣ್ಣ ಡಮ್ಮಿ ಕ್ಯಾಪ್ಸುಲ್ , ಒಮೆಪ್ರಜೋಲ್ ಪ್ರತಿದಿನ ಒಂದು ಸಣ್ಣ 20 ಮಿಲಿ ಗ್ರಾಂ ಕ್ಯಾಪ್ಸುಲ್ ಮತ್ತು ಎರಡು ದೊಡ್ಡ ಡಮ್ಮಿ ಕ್ಯಾಪ್ಸುಲ್‌ಗಳು ದಿನಕ್ಕೆ 4 ಬಾರಿ ಮತ್ತು ಅರಿಶಿನ ಜೊತೆಗೆ ಒಮೆಪ್ರಜೋಲ್ ಅಂತ ಮೂರು ಗುಂಪುಗಳಾಗಿ ವಿಂಗಡಿಸಲಾಗಿತ್ತು.
  • ಡಿಸ್ಪೆಪ್ಸಿಯಾ ಮೌಲ್ಯಮಾಪನದ ತೀವ್ರತೆ (SODA) ಸ್ಕೋರ್, ನೋವು ಮತ್ತು ಇತರ ರೋಗಲಕ್ಷಣಗಳಲ್ಲಿ 28 ದಿನಗಳ ನಂತರ ರೋಗಲಕ್ಷಣದ ತೀವ್ರತೆಯಲ್ಲಿ ಗಮನಾರ್ಹವಾದ ಕಡಿತವನ್ನು ಸೂಚಿಸಿದೆಯಂತೆ. ರೋಗಿಗಳಲ್ಲಿ 56 ದಿನಗಳ ನಂತರ ಈ ನೋವು ತುಂಬಾನೇ ಕಡಿಮೆಯಾಗಿದೆಯಂತೆ.

Share to all

You May Also Like

More From Author