ಪ್ಯಾರಿಸ್ನಲ್ಲಿ ನಡೆಯುತ್ತಿರುವ 2024ರ ಒಲಿಂಪಿಕ್ಸ್ನಲ್ಲಿ ಜಾವಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಅವರು ಇಂದು ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಜಾವಲಿನ್ನಲ್ಲಿ ಪದಕದ ಭರವಸೆ ಆಟ ಮುಂದುವರಿಸಿದ್ದಾರೆ. ಹೌದು ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲೇ ಪ್ಯಾರಿಸ್ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಮಂಗಳವಾರ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ 89.34 ಮೀ ಎಸೆದು ನೀರಜ್ ಫೈನಲ್ಗೆ ಜಂಪ್ ಆಗಿದ್ದಾರೆ. ವಿಶ್ವ ಚಾಂಪಿಯನ್ ಮೇನಲ್ಲಿ ನಡೆದ ದೋಹಾ ಡೈಮಂಡ್ ಲೀಗ್ನಲ್ಲಿ 88.36 ಮೀ. ಎಸೆದಿದ್ದರು. ಪ್ಯಾರಿಸ್ನಲ್ಲಿ ಇದೇ ಆಗಸ್ಟ್ 8ರಂದು ಜಾವಲಿನ್ ಫೈನಲ್ ಪಂದ್ಯ ನಡೆಯಲಿದೆ. ಗುರುವಾರ ನೀರಜ್ ಚೋಪ್ರಾ ಫೈನಲ್ನಲ್ಲಿ ಗೆದ್ದು ಪದಕ ಗೆಲ್ಲುವ ನಿರೀಕ್ಷೆ ಹೆಚ್ಚಾಗಿದೆ.