ಆಟ ಅಂದ್ರೆ ಎದುರಾಳಿಯನ್ನು ಅಖಾಡದಲ್ಲಿ ಎದುರಿಸಬೇಕೆ ವಿನಹ, ಹೇಡಿ ತರ ಗೆಲ್ಲೋದಲ್ಲ. ಪಂದ್ಯದಲ್ಲಿ ಮೋಸ ಮಾಡಿ ಗೆದ್ದರೆ ಅವರು ಕ್ರೀಡಾಪಟು ಆಗಲು ಸಾಧ್ಯವಿಲ್ಲ. ಆದರೆ ಇಲ್ಲೊಬ್ಬ ಆಟಗಾರ್ತಿ ಎದುರಾಳಿ ಸೋಲಿಸಲು ನೀಚ ಕೃತ್ಯಕ್ಕೆ ಕೈ ಹಾಕಿದ್ದಾರೆ. ಅದೇನು ಅಂತ ಹೇಳ್ತಿವಿ ಸ್ಟೋರಿ ನೋಡಿ. ಹೌದು, ಪಂದ್ಯದ ವೇಳೆ ಪ್ರತಿಸ್ಪರ್ಧಿಯನ್ನು ವಿಷ ಹಾಕಿ ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ರಷ್ಯಾದ ಚೆಸ್ ಆಟಗಾರ್ತಿಯನ್ನು ಸಸ್ಪೆಂಡ್ ಮಾಡಲಾಗಿದೆ.
ಅಮೀನಾ ಅಬಕರೋವಾ ಸಸ್ಪೆಂಡ್ ಆಗಿದ್ದಾರೆ ಎನ್ನಲಾಗಿದೆ. ಪಂದ್ಯದ ವೇಳೆ ಪ್ರತಿಸ್ಪರ್ಧಿಯನ್ನು ವಿಷ ಹಾಕಿ ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿದೆ. ಆಟಗಾರ್ತಿಯನ್ನು ಚೆಸ್ ಪಂದ್ಯಾವಳಿಯಿಂದ ಆಜೀವ ಪರ್ಯಂತ ದೂರವಿಡುವ ಕುರಿತು ಚಿಂತನೆ ನಡೆಯುತ್ತಿದೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 40 ವರ್ಷದ ಅಮಿನಾ ಅಬಕರೋವಾ ತನ್ನ ಎದುರಾಳಿ ಉಮೈಗಾನತ್ ಒಸ್ಮನೋವಾಗೆ ವಿಷ ನೀಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಯನ್ನು ವೀಕ್ಷಿಸಿದ ಬಳಿಕ ಅಬಕರೋವಾರನ್ನು
ಬಂಧಿಸಲಾಯಿತು. ನನಗೆ ಮೊದಲೇ ಉಸಿರಾಟದ ತೊಂದರೆ ಇತ್ತು, ಮತ್ತೊಬ್ಬ ಆಟಗಾರರು ಕೂಡ ಅಸ್ವಸ್ಥರಾಗಿದ್ದರು. ಬಾಯಲ್ಲಿ ಕಬ್ಬಿಣದ ರುಚಿ ಇತ್ತು.
ಸಿಸಿಟಿವಿ ದೃಶ್ಯಾವಳಿಯಲ್ಲಿ ಘಟನೆ ನಡೆದಿದೆ. ಇದರಲ್ಲಿ ಅಬಕರೋವಾ ಪಂದ್ಯಕ್ಕೆ ಕೇವಲ 20 ನಿಮಿಷಗಳ ಮೊದಲು ಚೆಸ್ ಬೋರ್ಡ್ ಬಳಿ ಹೋದರು. ಕ್ಯಾಮೆರಾಗಳು ಆನ್ ಆಗಿವೆಯೇ ಎಂದು ಅವರು ಮೊದಲು ಕೇಳಿದ್ದರು. ಆದರೆ ಅದು ಸರಿ ಇಲ್ಲ ಎಂದು ಹೇಳಲಾಗಿತ್ತು. ನಂತರ ಚೆಸ್ ಬೋರ್ಡ್ ಮೇಲೆ ಮರ್ಕ್ಯೂರಿ ರೀತಿಯ ವಿಷಯವನ್ನು ಲೇಪಿಸಿದ್ದರು. ಆದರೆ ಆಕೆಯ ದುರಾದೃಷ್ಟ ಎಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಆರೋಪಿ ಅಮಿನಾ ಅಬಕರೋವಾ ಅವರನ್ನು ಈಗ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಮತ್ತು ಆಕೆಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ರಷ್ಯಾದ ಚೆಸ್ ಫೆಡರೇಶನ್ ಅಧ್ಯಕ್ಷ ಆಂಡ್ರೆ ಫಿಲಾಟೊವ್ ಅವರು ಘಟನೆಯ ತನಿಖೆಗಾಗಿ ಅಬಕರೋವಾ ಅವರನ್ನು ರಷ್ಯಾದ ಚೆಸ್ ಸ್ಪರ್ಧೆಗಳಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.