ಅಂಗನಾವಾಡಿ ಮಕ್ಕಳಿಗೆ ನೀಡುವ ಮೊಟ್ಟೆ ಓಂ ಅಸತೋಮಾ ಸದ್ಗಮಯ. ಮಕ್ಕಳಿಗೆ ಮೊಟ್ಟೆ ಕೊಟ್ಟು ಪೋಟೋ ಕ್ಲಿಕ್ಕಿಸಿ ಗಬಕ್ಕಂತ ಕಸಿದುಕೊಳ್ಳುವ ಕಿರಾತಕಿಯರು..
ಕೊಪ್ಪಳ:-ಅಂಗನವಾಡಿಯ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆ ಮೊಟ್ಟೆ ಕಳ್ಳತನ ಮಾಡುವ ವಿಡಿಯೋ ಈಗ ಕೊಪ್ಪಳ ಜಿಲ್ಲೆಯಲ್ಲಿ ವೈರಲ್ ಆಗಿದೆ.
ಸರಕಾರ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯಲ್ಲಿ ಹೇಗೆಲ್ಲಾ ಗೋಲ್ಮಾಲ ನಡೆಯುತ್ತಿದೆ ಅಂತಾ ಹೇಳತೇವಿ ನೋಡಿ.ಮಕ್ಕಳಿಗೆ ಮೊದಲು ಮೊಟ್ಟೆ ಕೊಟ್ಟು ಪೋಟೋ ಕ್ಲಿಕ್ಕಿಸಿ ನಂತರ ಮಕ್ಕಳ ಪ್ಲೇಟಿನಿಂದ ಮೊಟ್ಟೆ ಕಸಿದುಕೊಂಡು ಮಾರಾಟ ಮಾಡುವ ಪ್ಲ್ಯಾನ ಅವರದು ಎನ್ನಲಾಗಿದೆ.ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನಾವಾಡಿಯಲ್ಲಿ ಈ ಕೃತ್ಯ ನಡೆದಿದೆ.