ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ಆರೋಪಿ ದರ್ಶನ್ ವಿರುದ್ಧ ದಿನದಿಂದ ದಿನಕ್ಕೆ ಸಾಕ್ಷ್ಯಗಳು ಗಟ್ಟಿಯಾಗ್ತಿವೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಧಪಟ್ಟಂತೆ ದರ್ಶನ್ & ಗ್ಯಾಂಗ್ ಗೆ ಜಾಮೀನು ಸಿಗದಂತೆ ಮಾಡಲು ಖಾಕಿ ತಯಾರಿ ನಡೆಸಿದೆ. ದರ್ಶನ್ ಹಾಗೂ ಸಂಗಡಿಗರ ಬಂಧನವಾಗಿ ಇಂದಿಗೆ ಎರಡು ತಿಂಗಳಾಯ್ತು. ಪ್ರಕರಣದ ತನಿಖೆ ಬಹುತೇಕ ಮುಗಿದಿದ್ದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆಗೆ ತಯಾರಿ ನಡೆಸುತ್ತಿದ್ದಾರೆ.
ಪ್ರಕರಣದಲ್ಲಿ ಸಿಸಿಟಿವಿ ದೃಶ್ಯ, ಪಟ್ಟಣಗೆರೆ ಶೆಡ್‌ನಲ್ಲಿ ಸಿಕ್ಕಿದ್ದ ಬ್ಲಡ್ ಸಾಂಪಲ್ಸ್, ಆರೋಪಿಗಳ ವಿರುದ್ಧ ಸಿಕ್ಕಿರೋ ಎವಿಡೆನ್ಸ್ ಸೇರಿದಂತೆ ಸುಮಾರು 200ಕ್ಕೂ ಅಧಿಕ ಸಾಕ್ಷ್ಯಗಳನ್ನ ಸಿದ್ಧಪಡಿಸಿದ್ದಾರೆ. ಇದರ ಬೆನ್ನಲ್ಲೇ ಕಳೆದೆರಡು ದಿನಗಳ ಹಿಂದೆ ಪೊಲೀಸರು ವಶಪಡಿಸಿಕೊಂಡಿದ್ದ ಆರೋಪಿ ದರ್ಶನ್ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಇರೋದು ಎಫ್‌ಎಲ್‌ಎಲ್ ವರದಿಯಲ್ಲಿ ಪತ್ತೆಯಾಗಿತ್ತು. ಒಗೆದು ಒಣ ಹಾಕಿದ್ದ ಬಟ್ಟೆಯಲ್ಲಿ ರಕ್ತದ ಕಲೆ ಹೇಗೆ ಸಿಕ್ತು ಅನ್ನೋ ಕುತೂಹಲಕ್ಕೆ ಕಾರಣವಾಗಿದೆ.
ರಕ್ತದ ಕಲೆಗಳನ್ನ ಪತ್ತೆ ಹಚ್ಚಲು ಇರುವ ಲುಮಿನಲ್ ಟೆಸ್ಟ್ ಇದಾಗಿದೆ. ಲಮಿನಲ್ ಎಂಬುದು ಒಂದು ರೀತಿಯ ಕೆಮಿಕಲ್. ರಕ್ತದ ಕಲೆ ಇರುವ ಬಟ್ಟೆಗೆ ಲುಮಿನಲ್ ಕೆಮಿಕಲ್ ಅಪ್ಲೈ ಮಾಡಲಾಗುತ್ತೆ. ಅದು ಹಿಮೋಗ್ಲೋಬಿನ್ ಜೊತೆ ವರ್ತಿಸಿ, ನಂತರ ನೀಲಿ ಹಾಗೂ ಹಸಿರು ಬಣ್ಣದ ದ್ರಾವಣ ಉತ್ಪಾದನೆ ಮಾಡುತ್ತೆ. ನೀಲಿ-ಹಸಿರು ಬಣ್ಣದ ದ್ರಾವಣ ಸಂಗ್ರಹಿಸಿ ಅದರಿಂದ ಡಿಎನ್‌ಎ ಸಂಗ್ರಹಿಸಲಾಗುತ್ತೆ. ಹೀಗೆ ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿವೆ.
ರೇಣುಕಾಸ್ವಾಮಿ ಕೊಲೆಗೂ ಮುನ್ನ ಎ2 ದರ್ಶನ್ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿದ್ರು. ಪ್ರಕರಣದ ಮೂವರು ಆರೋಪಿಗಳಾದ ದರ್ಶನ್, ಪ್ರದೋಷ್ ಹಾಗೂ ವಿನಯ್ ಜೊತೆ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕಾಣಿಸಿಕೊಂಡಿದ್ರು. ಪಾರ್ಟಿ ವೇಳೆಯೇ ಎಂಟ್ರಿ ಕೊಟ್ಟಿದ್ದ ಆರೋಪಿ ಪವನ್ , ರೇಣುಕಾಸ್ವಾಮಿ ಕರೆತಂದ ಬಗ್ಗೆ ಹೇಳ್ತಿದ್ದಂತೆ ಪಾರ್ಟಿ ಮಧ್ಯೆಯೇ ದರ್ಶನ್ ಎದ್ದು ಹೋಗ್ತಿದ್ರು. ಪಾರ್ಟಿಯಲ್ಲಿ ಏನಾಯ್ತು ಅನ್ನೋ ಕುರಿತು ನ್ಯಾಯಾಧೀಶರ ಎದುರು ಕೆರೆದೊಯ್ದು ಸಿಆರ್‌ಪಿಸಿ 164 ಅಡಿಯಲ್ಲಿ ಚಿಕ್ಕಣ್ಣ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ 17 ಆರೋಪಿಗಳಿದ್ದಾರೆ. ಕೊಲೆ ಆಗುವ ಕೆಲವು ದಿನಗಳ ಮುಂಚಿನಿಂದಲೂ ಯೋಜನೆ ರೂಪಿಸಲಾಗಿದೆ. ಕೊಲೆಯಾದ ಎರಡು ದಿನಗಳ ವರೆಗೆ ಹಲವು ಘಟನೆಗಳು ನಡೆದಿವೆ ಹಾಗಾಗಿ ಸಾಕ್ಷ್ಯ, ಮಹಜರು ಮಾಡಿರುವ ಸ್ಥಳಗಳ ಸಂಖ್ಯೆ ಎಲ್ಲ ಹೆಚ್ಚಿವೆ ಹಾಗಾಗಿ ಸಹಜವಾಗಿಯೇ ಚಾರ್ಜ್ ಶೀಟ್ ಸಲ್ಲಿಕೆ ತಡವಾಗುತ್ತಿದೆ