ಮತ್ತೊಂದು ಅಂಗನವಾಡಿಯ ಕರ್ಮಕಾಂಡ: ಕಾಳಸಂತೆಯಲ್ಲಿ ಮಕ್ಕಳ ಆಹಾರ ಪದಾರ್ಥ ಸೇಲ್!, ಅಧಿಕಾರಿಗಳೇ ಎಲ್ಲಿದ್ದೀರಾ!?

Share to all

ಕೊಪ್ಪಳ:- ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸರ್ಕಾರ ಉಚಿತವಾಗಿ ಕೊಡುವ ಆಹಾರ ಪದಾರ್ಥಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ವಿತರಿಸುವ ಮೊಟ್ಟೆಯಲ್ಲಿ ಗೋಲ್ಮಾಲ್​ ನಡೆದ ಬಗ್ಗೆ ಆರೋಪ ಕೇಳಿಬಂದಿತ್ತು. ಮಕ್ಕಳಿಗೆ ಮೊಟ್ಟೆ ಕೊಟ್ಟು ಫೋಟೋ ಕ್ಲಿಕ್ಕಿಸಿದ ನಂತರ ಮೊಟ್ಟೆಯನ್ನು ಕಸಿದುಕೊಂಡಿದ್ದ ವಿಡಿಯೋ ವೈರಲ್​ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಅಂಗನವಾಡಿ ಯ ಕರ್ಮಕಾಂಡ ಬಯಲಾಗಿದೆ.

ಜಿಲ್ಲೆಯ ಹುಣಸಗಿ ತಾಲೂಕಿನ ಹಗರಟಗಿ ಗ್ರಾಮದಲ್ಲಿ ನಡೆದಿದೆ. ಹಗರಟಗಿ ಗ್ರಾಮದ‌ ಅಂಗನವಾಡಿ ಕೇಂದ್ರ-2ರ ಅಕ್ರಮ ಬಯಲಾಗಿದ್ದು, ಅಂಗನವಾಡಿ ಕಾರ್ಯಕರ್ತೆ ಉಮಾರಿಂದ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಅಕ್ಕಿ, ಬೇಳೆ, ಶೇಂಗಾ, ಬೆಲ್ಲ, ಚಿಕ್ಕೆ ಹಾಗೂ ಅಡುಗೆ ಎಣ್ಣೆ ಸೇರಿದಂತೆ ಸರ್ಕಾರದಿಂದ ಬರುವ ಆಹಾರ ಪದಾರ್ಥಗಳನ್ನು ಮೂಟೆಯಲ್ಲಿ ಉಮಾ ಮನೆಗೆ ಕೊಂಡೊಯ್ಯುತ್ತಿದ್ದಾರೆ. ಸ್ಥಳೀಯರ ಮೊಬೈಲ್​ನಲ್ಲಿ ಅಂಗನವಾಡಿ ಕಾರ್ಯಕರ್ತೆಯ ಕಳ್ಳಾಟ ಬಯಲಾಗಿದೆ.


Share to all

You May Also Like

More From Author