15 ವರ್ಷದ ಬಾಲಕನ ಅಪಹರಣ ಪ್ರಕರಣ..ಲುಕ್ ಔಟ್ ನೋಟೀಸ್ ಜಾರಿ.ಕಲಘಟಗಿ ಪೋಲೀಸರಿಗೆ ತಲೆ ನೋವಾದ ಬಾಲಕನ ಕಿಡ್ನ್ಯಾಪ್ ಪ್ರಕರಣ.
ಕಲಘಟಗಿ:-ಶಾಲೆಗೆ ಹೋದ ಬಾಲಕ ಹತ್ತು ತಿಂಗಳಾದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕಲಘಟಗಿ ಪೋಲೀಸ ಠಾಣೆಯಿಂದ ಲುಕ್ ಔಟ್ ನೋಟೀಸ ಜಾರಿ ಮಾಡಿದ್ದಾರೆ.
ಹೌದು ಕಲಘಟಗಿ ತಾಲೂಕಿನ ಸಂಗೇದೇವರಕೊಪ್ಪದ ಬ್ರಹ್ಮಾನಂದ ಕೆಳಗಿನಮನಿ ಎಂಬಾತ ಕಳೆದ ಹತ್ತು ತಿಂಗಳ ಹಿಂದೆ ಕಲಘಟಗಿಯಲ್ಲಿರುವ ಸ್ಕೂಲಿಗೆ ಹೋದ ಬಾಲಕ ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಪಾಲಕರು ಕಲಘಟಗಿ ಪೋಲೀಸ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲು ಮಾಡಿದ್ದರು.
ದೂರು ದಾಖಲಾದ ದಿನದಿಂದ ಕಲಘಟಗಿ ಪೋಲೀಸರು ಹುಡುಕದ ಜಾಗವಿಲ್ಲಾ.ಕಳೆದು ಹೋದ ಬಾಲಕ ಈವರೆಗೂ ಮನೆಗೂ ಪೋನ್ ಮಾಡಿಲ್ಲಾ.ಅವನ ಬಳಿಯೂ ಪೋನ್ ಇಲ್ಲಾ.ಹೀಗಾಗಿ ಪೋಲೀಸರಿಗೆ ಬಾಲಕನ ಪತ್ತೆ ಹಚ್ಚಲು ಕಷ್ಟವಾಗಿದೆ ಎನ್ನಲಾಗಿದೆ.
ಬಾಲಕ ಕಳೆದ ಹತ್ತು ತಿಂಗಳುಗಳಿಂದ ಪತ್ತೆಯಾಗದ ಹಿನ್ನೆಲೆಯಲ್ಲಿ ಕಲಘಟಗಿ ಪೋಲೀಸರು ಲುಕ್ ಔಟ್ ನೋಟೀಸ ಜಾರಿ ಮಾಡಿದ್ದು ಪೋಟೋದಲ್ಲಿರುವ ಬಾಲಕ ಕಂಡರೆ ಈ ಕೆಳಗಿನ ನಂಬರಗೆ ಕರೆ ಮಾಡಲು ಪೋಲೀಸರು ಮನವಿ ಮಾಡಿದ್ದಾರೆ.